ಜುಡೋ ಸ್ಪರ್ಧೆಯಲ್ಲಿ ಚಿನ್ನ ಬೆಳ್ಳಿ ಪದಕ ಗೆದ್ದ ಪೊಳಲಿ ಶ್ರೀ ರಾಮಕೃಷ್ಣ ತಪೋವನದ ವಿದ್ಯಾರ್ಥಿಗಳು
ಕೈಕಂಬ : ಬಂಟ್ವಾಳ ತಾಲ್ಲೂಕಿನ ಕಳ್ಳಿಗೆ ಗ್ರಾಮದ 6ಮಂದಿ ಮಕ್ಕಳು ರಾಜ್ಯ ರಾಜಧಾನಿಯಲ್ಲಿ ಚಿನ್ನ ಬೆಳ್ಳಿ ಪದಕ ಗೆದ್ದು ಮಿಂಚಿದ್ದಾರೆ. ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕ್ರೀಡಾ ಇಲಾಖೆ ಮತ್ತು ಯುವ ಸಬಲೀಕರಣ ಇಲಾಖೆ ವತಿಯಿಂದ ನಡೆಯುತ್ತಿರುವ ರಾಜ್ಯ ಮಿನಿ ಒಲಂಪಿಕ್ ಕ್ರೀಡಾಕೂಟದ ಜುಡೋ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಭಾಗವಹಿಸಿದ್ದ ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಜುಡೋ ತರಗತಿಯ ವಿದ್ಯಾರ್ಥಿಗಳಾದ ಗೀತೇಶ್, ಸಂದೀಪ್, ತನ್ಮಯ ಪಿ.ಶೆಟ್ಟಿ, ಹಂಸಿಕಾ, ಸಾಥ್ವಿಕಾ. ಯಶ್ವಿನಿ ಪದಕ ಗೆದ್ದಿದ್ದಾರೆ. ಪೊಳಲಿ ಶ್ರೀ ರಾಮಕೃಷ್ಣ ತಪೋವನದ ವಿವೇಕಾ ಚೈತನ್ಯಾನಂದ ಸ್ವಾಮೀಜಿ ಅಭಿನಂದನೆ ವ್ಯಕ್ತಪಡಿಸಿದ್ದಾರೆ.