ಪುಂಜಾಲಕಟ್ಟೆ: ದ.ಕ‌ಜಿಲ್ಲೆಯಲ್ಲಿ ಸಂಸ್ಕಾರ , ಸಂಸ್ಕ್ರತಿ ಉಳಿಯಲು ಧಾರ್ಮಿಕ ಕೇಂದ್ರಗಳ ಪಾತ್ರ ಹಿರಿದು, ಇಂತಹ ಕ್ಷೇತ್ರಗಳ ಅಭಿವೃದ್ಧಿಗೆ ಕೊಡುಗೆ ನೀಡುವ ಕೆಲಸ ನಿರಂತರವಾಗಿ ನಡೆಯುವಂತೆ ಮಾಡಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಅವರು ಹೇಳಿದರು.WhatsApp Image 2022-04-10 at 6.17.58 PM

ಶ್ರೀ ರಾಮಾಂಜನೇಯ ಭಜನಾ ಮಂದಿರ (ರಿ.) ಶ್ರೀರಾಮ ನಗರ ಪುಂಜಾಲಕಟ್ಟೆ ನವೀಕೃತ ಭಜನಾ ಮಂದಿರದಲ್ಲಿ ಶ್ರೀ ರಾಮಾಂನೇಯ ದೇವರ ಪುನರ್ ಪ್ರತಿಷ್ಠೆ ಧಾರ್ಮಿಕ ಸಭಾ ಕಾರ್ಯಕ್ರಮದ ಆದ್ಯಕ್ಷತೆ ವಹಿಸಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿದರು.WhatsApp Image 2022-04-10 at 6.17.49 PM

182 ಧಾರ್ಮಿಕ ಕೇಂದ್ರ ಗಳಿಗೆ ಸಾಗುವ ರಸ್ತೆಗಳ ಅಭಿವೃದ್ಧಿ ಮಾಡಿದ ಸಂತಸ ಇದೆ. ಗ್ರಾಮಗ್ರಾಮಗಳ ಅಭಿವೃದ್ಧಿ ಜೊತೆಗೆ ಮಕ್ಕಳಿಗೆ ಸಂಸ್ಕಾರಗಳು ಸಿಗಬೇಕಾದರೆ ಇಂತಹ ಧಾರ್ಮಿಕ ಕೇಂದ್ರಗಳಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದರು.WhatsApp Image 2022-04-10 at 6.17.37 PM
ಜ್ಯೋತಿಷಿ ವಿದ್ವಾನ್ ವೆಂಕಟರಮಣ ಮಚ್ಚಿನ್ನಾಯ ಕಾರಿಂಜ ಸಭಾ ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ದರು.

ಗೌರವ ಅಧ್ಯಕ್ಷ ಎಂ.ತುಂಗಪ್ಪ ಬಂಗೇರ, ಬಿಜೆಪಿ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ, ಉದ್ಯಮಿ ನಿತ್ಯಾನಂದ ಪೂಜಾರಿ ಕೆಂತಲೆ,ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಉಡುಪಿ ವಿಭಾಗದ ನಿರ್ದೇಶಕ ವಸಂತ ಸಾಲಿಯಾನ್, ರೊ.ಚಿಕ್ಕಣ್ಣಯ್ಯ, ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿ.ಅಧ್ಯಕ್ಷ ಲಕ್ಮೀನಾರಾಯಣ ಉಡುಪ, ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷ ಹರ್ಷಿಣಿ ಪುಷ್ಪಾನಂದ, ರಾಮಾಂಜನೇಯ ಮಹಿಳಾ ಜಾಗೃತಿ ಸಮಿತಿ ಅಧ್ಯಕ್ಷೆ ಲಕ್ಮೀ ಜೆ.ಬಂಗೇರ, ಮಾಜಿ ತಾ.ಪಂ‌.ಸದಸ್ಯ ರಮೇಶ್ ಪೂಜಾರಿ ಕುಡ್ಮೇರು, ಉದ್ಯಮಿ ಹೇಮಂತ್ ಕುಮಾರ್, ಜಗನ್ನಾಥ ಶೆಟ್ಟಿ, ಇರ್ವತ್ತೂರು ಗ್ರಾ.ಪಂ.ಸದಸ್ಯರಾದ ದಯಾನಂದ ನಾಯ್ಕ್, ಉಮೇಶ್ ಪೂಜಾರಿ, ಉದ್ಯಮಿ ಮೋಹನ್ ಶೆಟ್ಟಿ, ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಪಿ. ಮತ್ತಿತರರು ಉಪಸ್ಥಿತರಿದ್ದರು.

ಭಜನಾ ಮಂದಿರದ ಗೌರವ ಅಧ್ಯಕ್ಷ ಎಂ.ತುಂಗಪ್ಪ ಬಂಗೇರ ಪ್ರಸ್ತಾವಿಕವಾಗಿ ಮಾತನಾಡಿದರು. ರಾಮಾಂಜನೇಯ ಭಜನಾ ಮಂದಿರದ ಅಧ್ಯಕ್ಷ ಶ್ರೀನಿವಾಸ ಪಿ.ಅತ್ತಾಜೆ ಸ್ವಾಗತಿಸಿದರು. ಪ್ರಭಾಕರ ಪಿ.ಎಂ. ಪುಂಜಾಲಕಟ್ಟೆ ಧನ್ಯವಾದ ನೀಡಿದರು. ಸಂತೋಷ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *