ಮಾಣಿ:  ಕುಲಾಲ ಬಾಂಧವರ  ಬಹುಬೇಡಿಕೆಯ ಕುಲಾಲ ಸಮುದಾಯ ಭವನ ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ  ಮಾಣಿ ಕುಲಾಲ ಸೇವಾ ಸಂಘದ ಪದಾಧಿಕಾರಿಗಳಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ರಾಜೇಶ್ ನಾಯ್ಕ್ ಅವರಿಗೆ ಮನವಿ ಸಲ್ಲಿಸಲಾಯಿತು.WhatsApp Image 2022-04-05 at 2.59.07 PM

ಸಕಾರಾತ್ಮಕವಾಗಿ ಸ್ಪಂದಿಸಿದ ಮಾನ್ಯ ಶಾಸಕರು ಸಮುದಾಯ ಭವನ ನಿರ್ಮಾಣಕ್ಕೆ ಗರಿಷ್ಠ ಪ್ರಮಾಣದ ಮೊತ್ತ ಒದಗಿಸಿ ಕೊಡುವುದಾಗಿ ಭರವಸೆ ನೀಡಿದರು.. ಈ ಸಂದರ್ಭದಲ್ಲಿ ಮಾಣಿ ಕುಲಾಲ ಸೇವಾ ಸಂಘದ ಅಧ್ಯಕ್ಷರಾದ ಭೋಜನಾರಾಯಣ ನೇರಳಕಟ್ಟೆ, ಗೌರವಾಧ್ಯಕ್ಷರಾದ ರಾಮಚಂದ್ರ ಮಾಸ್ಟರ್  ಗಣೇಶ ನಗರ, ಕುಲಾಲ ಸೇವಾ ಸಂಘದ ಪದಾಧಿಕಾರಿಗಳಾದ ಗೋಪಾಲ್ ಕುಲಾಲ್ ಶಂಭುಗ ,ಯತಿರಾಜ್ ಪೆರಾಜೆ, ನಾಗೇಶ್ ಮಾಣಿ ಉಪಸ್ಥಿತರಿದ್ದರು..

By suddi9

Leave a Reply

Your email address will not be published. Required fields are marked *