ತೀರ್ಥಹಳ್ಳಿ: ಅ.29ರಂದು ದುರುಳರ ಅಟ್ಟಹಾಸಕ್ಕೆ ಕೊಲೆಯಾಗಿ ಹೋದ ನಂದಿತಾ ಪೂಜಾರಿ(13) ಬರೆದಿದ್ದಾಳೆ ಎನ್ನಲಾದ ಪತ್ರ ಸಂಶಯದಿಂದ ಕೂಡಿದ್ದು, ಅದನ್ನು ಬರೆದುಕೊಟ್ಟವರ್ಯಾರು ಎಂದು ಸಾರ್ವಜನಿಕರು ಪ್ರಶ್ನಿಸತೊಡಗಿದ್ದಾರೆ.
ಸಂಶಯಗಳು:
ನಂದಿತಾಳ ಚಿಕ್ಕ ವಯಸ್ಸಿಗೆ ಆತ್ಮಹತ್ಯೆಯಂಥಾ ಪರಿಕಲ್ಪನೆ ಮೂಡಿದ್ದಾದರೂ ಹೇಗೆ?
ಯಾಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ?
ಚೆನ್ನಾಗಿ ಓದಲೇ ಇಲ್ಲ ಎಂಬ ವಿಚಾರ ಆ ಪತ್ರದಲ್ಲಿದ್ದು, ಪರೀಕ್ಷೆ ಅಲ್ಲದೆ ಸಮಯದಲ್ಲಿ ಓದುವ ವಿಚಾರ ಹೇಗೆ ನುಸುಳಿತು?
ನಂದಿತಾ ಶಿಕ್ಷಕ ಆಕೆ ಬುದ್ಧಿವಂತೆ ಎಂದು ಹೇಳಿದ್ದರಾದರೂ, ಆಕೆ ಚೆನ್ನಾಗಿ ಓದಲೇ ಇಲ್ಲ ಎಂದು ಪ್ರಸ್ತಾಪಿಸಿದ್ದು ಯಾಕೆ?
ನೀಲಿ ಶಾಯಿಯಲ್ಲಿ ಬರೆಯುತ್ತಿದ್ದ ಹುಡುಗಿಗೆ ಕೆಂಪು ಶಾಯಿ ಪೆನ್ನು ಹೇಗೆ ಬಂತು?
ಸಾಯುವ ಹಂತದಲ್ಲಿದ್ದ ಹುಡುಗಿ ಅಷ್ಟು ಚೆನ್ನಾದ ಅಕ್ಷರದಲ್ಲಿ ಹೇಗೆ ಬರೆದಳು?
ಆನಂದಗಿರಿ ಹತ್ತಿರ ಸಿಸಿಟಿಸವಿಯಲ್ಲಿ ದೃಶ್ಯದ ಕುರಿತು ರೆಕಾರ್ಡ್ ಆಗಿದೆ ಎಂದು ಪೊಲೀಸರು ಹೇಳುತ್ತಿದ್ದು, ಆನಂದಗಿರಿ ಗುಡ್ಡದಲ್ಲಿ ಸಿಸಿಟಿಸಿಅಳವಡಿಸಿದವರ್ಯಾರು?
ಆಕೆ ಅಸ್ವಸ್ಥ ಸ್ಥಿತಿಯಲ್ಲಿದ್ದ ಸಂದರ್ಭ ವಿಚಾರಣೆಗೆ ಹೋಗಿದ್ದ ಕಾನ್ಸ್ ಸ್ಟೇಬಲ್ ನೀಡಿದ ವರದಿ ಏನಾಯ್ತು?
ಇಷ್ಟು ದಿನಗಳ ಕಾಲ ಸಿಗದ ಡೆತ್ನೋಟ್ ಒಮ್ಮೆಲೆ ಸಿಕ್ಕಿದ್ದು ಹೇಗೆ, ಅದು ಎಲ್ಲಿ ಸಿಕ್ಕಿತು, ಗುಡ್ಡದಲ್ಲೇ ಸಿಕ್ಕಿದ್ದಾದರೇ ಮಸುಕಾಗಿಲ್ಲ ಯಾಕೆ?
ಪೊಲೀಸರು ಒಬ್ಬನನ್ನು ಬಂಧಿಸಿದ್ದೇವೆ ಎಂದು ಹೇಳಿದ್ದು ಆತನ ಕಥೆ ಏನಾಯ್ತು?
ಪೊಲೀಸರು ಫ್ರಿಂಟ್ ತೆಗೆದ ಡೆತ್ ನೋಟ್ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು ಯಾಕೆ?
ನಂದಿತಾ ಜೀವನ್ಮರಣ ಸ್ಥಿತಿಯಲ್ಲಿದ್ದಾಗ ತನ್ನನ್ನು ಅಪಹರಿಸಿದವರ ಹೆಸರು ಹೇಳಿದ್ದಳಂತೆ, ಅದನ್ನು ಮುಚ್ಚಿಹಾಕಿದ್ದು ಯಾಕೆ?
ಅಷ್ಟೂ ಅಲ್ಲದೆ ನಂದಿತಾಳ ಹೆಸರಲ್ಲಿ ಡೆತ್ ನೋಟ್ ಬರೆದುಕೊಟ್ಟವರ್ಯಾರು?
-ಹೀಗೆ ಹಲವಾರು ಸಂಶಯಗಳು ಸಾರ್ವಜನಿಕರನ್ನು ಕಾಡತೊಡಗಿದೆ.
ರಾಜಕೀಯ ಪ್ರಭಾವ?
ಓಮ್ನಿ ಕಾರಲ್ಲಿ ಬಂದು ಅಪಹರಿಸಿ ಬಾಲಕಿಯನ್ನು ಸರಣಿ ಅತ್ಯಾಚಾರಗೊಳಿಸಿದ ನಾಲ್ವರು ಆರೋಪಿಗಳು ಅನ್ಯಕೋಮಿನ ಗುಂಪಿಗೆ ಸೇರಿದ್ದು, ಈ ಪೈಕಿ ಒಬ್ಬಾತ ಸ್ಥಳೀಯ ಶ್ರೀಮಂತ ಉದ್ಯಮಿಯ ತಮ್ಮನಾಗಿದ್ದಾನೆ. ಈತ ರಾಜಕೀಯ ಪ್ರಭಾವ ಬೀರಿ ಪ್ರಕರಣವನ್ನು ಬೇರೆ ದಿಕ್ಕಿನತ್ತ ಕೊಂಡೊಯ್ಯಲು ಯತ್ನಿಸಿದ್ದಾನೆ ಎಂದು ವ್ಯಕ್ತಿಯೊಬ್ಬನ ಬಗ್ಗೆ ಸ್ಥಳೀಯರು ಇನ್ನೊಂದುರೀತಿಯಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ.
ತೀರ್ಥಹಳ್ಳಿ ಕಿಡಿ ಬೆಂಕಿಯಾಗುವ ಸಾಧ್ಯತೆ:
ನಂದಿತಾ ಪೂಜಾರಿ ಹತ್ಯೆಯಿಂದ ಕರ್ನಾಟಕದ ಜನತೆ ಎಷ್ಟು ಕ್ರುದ್ಧರಾಗಿದ್ದಾರೆಂದರೆ ಕಾನೂನು ಕೈಗೆತ್ತಿಕೊಳ್ಳುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಈಗಾಘಲೇ ವಾಟ್ಸ್ ಆಪ್, ಫೇಸ್ ಬುಕ್ ನಲ್ಲಿ ನಂದಿತಾ ಅಭಿಯಾನದಲ್ಲಿ ತೊಡಗಿರುವ ಜನರು ಇನ್ನಷ್ಟು ಪರಿಣಾಮಕಾರಿಯಾಗಿ ಹೋರಾಟಕ್ಕೆ ಅಣಿಯಾಗಲು ಸಿದ್ದತೆ ನಡೆಸುತ್ತಿದ್ದಾರೆ.
ವೈದ್ಯಕೀಯ ವಿವರ:
ಆಕೆಯ ಮರಣೋತ್ತರ ವರದಿಯಲ್ಲಿ ಆಕೆಯನ್ನು ಅತ್ಯಾಚಾಗೊಳಿಸಲಾಗಿಲ್ಲ, ವಿಷ ಸೇವಿಸಿ ರಕ್ತದೊತ್ತಡ ಕಡಿಮೆಯಾದ ಪರಿಣಾಮ ಆಕೆ ಮೃತಪಟ್ಟಿದ್ದಾಳೆ. ಅಲ್ಲದೆ ಆಕೆಯನ್ನು ಅತ್ಯಾಚಾರಗೊಳಿಸಿದ ಸಾಕ್ಷಿಯಾಗಿ ಆಕೆಯ ಮೈಮೇಲೆ ಯಾವುದೇ ಗಾಯದ ಗುರುತು ಕೂಡಾ ಸಿಕ್ಕಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಇಂದು ಶೃಂಗೇರಿ ಬಂದ್ :
ಇನ್ನು ಇದೇ ವಿಚಾರವಾಗಿ, ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ಇಂದು ಶೃಂಗೇರಿ ಬಂದ್ ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಶೃಂಗೇರಿ ಸಂಪೂರ್ಣ ಬಂದ್ ಆಗಿದ್ದು, ವ್ಯಾಪಾರಿಗಳು ಅಂಗಡಿ, ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಬಂದ್ಗೆ ಸಾಥ್ ಕೊಟ್ಟಿದ್ದಾರೆ.
ನಿನ್ನೆ ಹಲವರ ಬಂಧನ, ಕೇಸ್ ದಾಖಲು :
ನಿನ್ನೆ ಪ್ರತಿಭಟನೆ ವೇಳೆ ನಡೆದ ಕಲ್ಲು ತೂರಾಟ ಮತ್ತಿತರ ಘಟನೆಗಳ ಕುರಿತಾಗಿ ಪೊಲೀಸರು 9 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ, ವಾಹನ ಜಖಂ ಸೇರಿದಂತೆ ಒಟ್ಟು 9 ಪ್ರಕರಣಗಳು ದಾಖಲಾಗಿವೆ. ಇದುವರೆಗೆ 43 ಮಂದಿಯನ್ನು ಬಂಧಿಸಲಾಗಿದೆ. 

ಕೃತ್ಯಕ್ಕೆ ಬಳಸಿದ್ದ 25 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನಿನ್ನೆ ತಡ ರಾತ್ರಿ ಬಳ್ಳಾರಿ ಜೈಲಿಗೆ ರವಾನಿಸಲಾಗಿದೆ. ನವೆಂಬರ್? 16ರವರೆಗೆ ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತೀರ್ಥಹಳ್ಳಿಯಿಂದ 5 ಕಿ.ಮೀ ಸುತ್ತ ನಿಷೇಧಾಜ್ಞೆ :
ಮುಂಜಾಗ್ರತಾ ಕ್ರಮವಾಗಿ ನವೆಂಬರ್ 10ರವರೆಗೆ ತೀರ್ಥಹಳ್ಳಿ ನಗರದಿಂದ 5 ಕಿ.ಮೀ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

