ಬೆಂಗಳೂರು: ದ.ಕ. ಜಿಲ್ಲೆಯ ಬಂಟ್ವಾಳದ ದಡಲ ಕಾಡು, ಕೂಕ್ಕಬೆಟ್ಟ ಮೂಡುಬಿದಿರೆಯ ಅಳಿಯೂರಿನ ಶಾಲೆಗಳ ರೀತಿಯಲ್ಲಿ ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಬೇಕು ಎಂದು ಜೆಡಿಎಸ್‌ ಸದಸ್ಯ ಎಸ್.ಎಲ್. ಭೋಜೇಗೌಡ ಸಲಹೆ ನೀಡಿದ್ದಾರೆ. ಸಾಲಿನ ಬಜೆಟ್ ಮೇಲಿನ ಚರ್ಚೆಯಲ್ಲಿ ಕನ್ನಡ ಆಡಳಿತ 2022-23ನೇ ಭಾಷೆ ಮತ್ತು ಸರಕಾರಿ ಶಾಲೆಗಳ ಬಗ್ಗೆ ಮಾತನಾಡಿದ ಅವರು ದಕ್ಷಿಣ ಕನ್ನಡಜಿಲ್ಲೆಯ ಈ ಶಾಲೆಗಳ ಉದಾಹರಣೆ ನೀಡಿದರು.

ಬಂಟ್ವಾಳದ ದಡ್ಡಲಕಾಡು ಸರಕಾರಿ ಶಾಲೆ ಮುಚ್ಚುವ ಹಂತಕ್ಕೆ ಬಂದಿತ್ತು. ಅಲ್ಲಿ ಕೇವಲ 18 ಮಕ್ಕಳು ಇದ್ದರು. ಆದರೆ ಸ್ಥಳೀಯರೆಲ್ಲರೂ ಸೇರಿ 4 ಕೋಟಿ ರೂ. ವೆಚ್ಚದಲ್ಲಿ ಶಾಲೆಯನ್ನು ಅಭಿವೃದ್ಧಿಪಡಿಸಿದರು. ಈಗ ಅಲ್ಲಿ 1,100 ಮಕ್ಕಳು ಇದ್ದಾರೆ. 85 ಜನ ಶಿಕ್ಷಕರು ಇದ್ದಾರೆ. 5 ಬಸ್‌ಗಳಿವೆ. ಅದೇ ರೀತಿ ಕೂಕ್ರಬೆಟ್ಟ ಸರಕಾರಿ ಶಾಲೆಯಲ್ಲಿ 16 ಮಕ್ಕಳು ಇದ್ದರು. ಈಗ 144 ಮಕ್ಕಳು ಇದ್ದಾರೆ. ಒಂದು ಬಸ್ ಇದೇ. ಆದರೆ, ಈ ರೀತಿ ಇಡೀ ರಾಜ್ಯದಲ್ಲಿ ಸರಕಾರ ಶಾಲೆಯಲ್ಲಿ ಎಲ್ಲಿಯಾದರೂ ಬಸ್ ವ್ಯವಸ್ಥೆ ಇದ್ದರೆ ತೋರಿಸಿ ಎಂದು ಸರಕಾರಕ್ಕೆ ಭೋಜೇಗೌಡ ಸವಾಲು ಹಾಕಿದರು. ಮೂಡುಬಿದರೆಯ ಹಳಿಯೂರು ಸರಕಾರಿ ಶಾಲೆಯಲ್ಲಿ 140 ಮಕ್ಕಳು ಇದ್ದದ್ದು, ಈಗ 337 ಮಕ್ಕಳು ಇದ್ದಾರೆ. ಈ ಶಾಲೆಗಳ ರೀತಿ ಉಳಿದ ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಬೇಕು ಎಂದರು.

By suddi9

Leave a Reply

Your email address will not be published. Required fields are marked *