ಕೋಗಿಲೆಯ ಕಂಠದಲ್ಲಿ ಕಲೆಯಿದೆ, ನವಿಲಿನ ನಾಟ್ಯದಲ್ಲಿ ಕಲೆಯಿದೆ, ಹರಿಯುವ ನೀರಿನ ನಾದದಲ್ಲಿ ಕಲೆಯಿದೆ ಮೂಡುವ ಕಾಮನ ಬಿಲ್ಲಿನಲಿ ಕಲೆಯಿದೆ, ಕಲೆಯನ್ನು ಒಲಿಸಲು ಪ್ರಯತ್ನಿಸಿದರೆ ಯಾರಿಗೆ ಬೇಕಾದರೂ ಸರಸ್ವತಿ ಒಲಿಯುತ್ತಾಳೆ. ಅದಕ್ಕೆ ಜಾತಿ ಮತ ಧರ್ಮದ ಬೇಧವಿಲ್ಲ ವಯಸ್ಸಿನ ಮಿತಿ ಇಲ್ಲ, ಕಾಣಿಣ್ಯದಂತಿರುವ ಕಲೆಯಲ್ಲಿ ಅಭ್ಯಾಸವೆಂಬ ಆಯುಧವ ಹಿಡಿದರೆ ಜಯಶಾಲಿಯೆಂಬ ಪ್ರತಿಭೆಯಾಗಿ ಹೊರಸೂಸಲು ಸಾಧ್ಯವಾಗುತ್ತದೆ, ಅಂತಹ ಕಲಾವಿದರಲ್ಲಿ ಒಬ್ಬರಾದ ಅಪರೂಪದ ಗ್ರಾಮೀಣ ಬಹುಮುಖ ಪ್ರತಿಭೆ ಈ “ಚೈತ್ರ ಗಾಣಿಗ”WhatsApp Image 2021-09-18 at 14.13.49

ಗಾಯಕಿ ಚೈತ್ರಾಗಾಣಿಗ ಹುಟ್ಟಿದ್ದು ಬಂಟ್ವಾಳ ತಾಲೂಕಿನ ಕಲ್ಲಡ್ಕದ ನರಹರಿ ಎಂಬ ಚಿಕ್ಕ ಊರಿನಲ್ಲಿ ದಿವಂಗತ ಆನಂದ ಸಪಲ್ಯ ಮತ್ತು ತಾಯಿ ಕಮಲಾಕ್ಷಿ ಎಂಬ ಬಡ ದಂಪತಿಗಳ ಹಿರಿಯ ಪುತ್ರಿಯಾಗಿ ೧೮-೫-೧೯೯೯ ಜನಿಸಿದರು. ಇವರಿಗೆ ಧನುಷ ಗಾಣಿಗ ಎಂಬ ಸಹೋದರಿ ಇದ್ದಾರೆ.WhatsApp Image 2021-09-18 at 14.13.02

ತನ್ನ ಪ್ರಾಥಮಿಕ ಶಿಕ್ಷಣವನ್ನು ಅನುದಾನಿತ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಫರಂಗಿಪೇಟೆ ಮತ್ತು ಪ್ರೌಢ ಶಿಕ್ಷಣವನ್ನು ನಿತ್ಯ ಸಹಾಯ ಮಾತ ಪ್ರೌಡಶಾಲೆ ಮೇರ ಮಜಲ್ ಮತ್ತು ಪದವಿ ಪೂರ್ವ ವಿದ್ಯಾಭ್ಯಾಸವನ್ಮು ಪದವಿ ಪೂರ್ವ ಮಹಿಳಾ ಕಾಲೇಜು ಬಲ್ಮಠ ಮಂಗಳೂರಿನಲ್ಲಿ ಪಡೆದರು, ನಂತರ ತಾಂತ್ರಿಕ ಶಿಕ್ಷಣದಲ್ಲಿ ಮುಂದುವರಿದು ಕೆ.ಪಿ.ಟಿ ಕರ್ನಾಟಕ ಪಾಲಿಟೆಕ್ನಿಕ್ ಮಂಗಳೂರಿನಲ್ಲಿ ಮುಗಿಸಿದರು. ಪ್ರಸ್ತುತ ನಟನೆ ಮತ್ತು ಹಾಡುಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.WhatsApp Image 2021-09-18 at 14.08.55

ಉತ್ತಮ ಗಾಯಕಿಯಾಗಿ ಸುಭೀಕ್ಷೆಯನ್ನು ಪಡೆಯುತ್ತಿದ್ದರೂ ತನ್ನ ಕಲಾ ಪಯಣ ಆರಂಭಗೊಂಡದ್ದು ಗಂಡುಕಲೆಯಾದ ಯಕ್ಷಗಾನದಲ್ಲಿ ತನ್ನ ಆರನೇ ತರಗತಿಯಿಂದ ಆರಂಭಗೊಂಡು ಮೊದಲ ಗುರುಗಳಾದ “ಸೂರ್ಯನಾರಾಯಣ ಭಟ್” ಪದಕಣ್ಣಾಯ ಬಾಯಾರ್ ಇವರಿಂದ ಕಲಿತು ಯಕ್ಷಗಾನದಲ್ಲಿ ಪಾತ್ರಕ್ಕೆ ಜೀವ ತುಂಬುವ ಮೂಲಕ ಕಲಾ ಜೀವನಕ್ಕೆ ಅಂಬೆಗಾಲಿಟ್ಟರು. ಪ್ರಸ್ತುತ “ಸುನಿಲ್ ಪಲ್ಲಮಜಲ್” ಎಂಬ ಗುರುಗಳಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಇವರು ಮೊದಲು ಬಣ್ಣ ಹಚ್ಚಿದ್ದು “ನರಕಾಸುರ ಮೋಕ್ಷ” ಪ್ರಸಂಗದಲ್ಲಿ “ಕೃಷ್ಣನಾಗಿ”, ನಂತರ ಮುಂದುವರಿದು “ಅಂಧಕಾಸುರ ವಧೆ” ಪ್ರಸಂಗದಲ್ಲಿ “ಅಂದಕಾಸುರ”ನಾಗಿ , “ಮೀಣಾಕ್ಷಿ ಕಲ್ಯಾಣ”ದಲ್ಲಿ “ಮೀಣಾಕ್ಷಿ”ಯಾಗಿ , “ಕೃಷ್ಣ ಜನ್ಮ ಪೂತನಿ ಹರಣ”ದಲ್ಲಿ “ಪೂತನಿ”ಯಾಗಿ , “ಸುದರ್ಶನ ವಿಜಯ”ದ “ಸುದರ್ಶನ” ಪಾತ್ರ, “ಗರುಡ ಗರ್ವಭಂಗ”ದಲ್ಲಿ “ಹನುಮಂತ”ನ ಪಾತ್ರ ಹೀಗೆ ಹಲವಾರು ಯಕ್ಷಗಾನ ಪ್ರಸಂಗದಲ್ಲಿ ಮುಖ್ಯ ಪಾತ್ರಗಳಲ್ಲಿ
ಮಿಂಚಿದ್ದಾರೆ.

ತನ್ನ ಚಿಕ್ಕ ಪ್ರಾಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಇವರು ತನ್ನ ಅಜ್ಜಿ ಮನೆಯಲ್ಲಿ ಪಿಯೂಸಿ ವರೆಗಿನ ವಿದ್ಯಾಭ್ಯಾಸವನ್ನು ಮಾಡುತ್ತಾರೆ. ಮನೆಗೆ ಆಧಾರಸ್ತಂಭವಾಗಿದ್ದ ತಂದೆ ತೀರಿಕೊಂಡಾಗ ತುಂಬಾನೇ ನೋವಾಗಿತ್ತು ಮತ್ತು ಇನ್ನು ಇವರ ಜೀವನ ಹೇಗೆ ಎಂಬ ಚಿಂತೆಯೂ ಕಾಡತೊಡಗಿತು. ಇವರ ತಾಯಿ ಬೀಡಿ ಕಟ್ಟಿ ಮತ್ತು ಇವರು ಕಾರ್ಯಕ್ರಮಗಳನ್ನು ನೀಡಿ ಬಂದ ಸಂಭಾವನೆಯಿಂದ ಜೀವನ ಸಾಗುತ್ತಿದೆ. ಸಂಗೀತವನ್ನು ತುಂಬಾನೆ ಇಷ್ಟ ಪಡುತ್ತಿದ್ದ ಇವರು ಯಾವುದೇ ಸಂಗೀತ ಗುರುಗಳಿಲ್ಲದೆ ಹಾಡುಗಳ ಭಾವನೆಗಳನ್ನು ಮನಸಿಗೆ ಹಚ್ಚಿಕೊಂಡು ಹಾಡಲು ಪ್ರಾರಂಭಿಸಿದರು. ಬಾಲ್ಯದಿಂದಲೂ ಹೆಚ್ಚಾಗಿ ಭಜನೆಗಳನ್ನು ಹಾಡಿ ಭಜನಾ ತಂಡಗಳೊಂದಿಗೆ ಧಾರ್ಮಿಕ ಕಾರ್ಯಕ್ರಮ ಮತ್ತು ಊರ ಜಾತ್ರೆ ಹಬ್ಬ ಹರಿದಿನಗಳಿಗೆ ಹಾಡು ಹಾಡುತ್ತಾ, ಊರವರ ಜೊತೆ ಯಕ್ಷಗಾನವನ್ನು ಮಾಡುತ್ತಾ ಬಂದಿರುವ ಇವರನ್ನು “ಸತೀಶ್ ಕುಳಾಯಿ”ಯವರು ತನ್ನ ಟೀಮ್ ಜೊತೆ ಹಾಡಲು ಅವಕಾಶ ಮಾಡಿ ಕೊಡುತ್ತಾರೆ. ಅಲ್ಲಿಂದ ಬೇರೆ ಬೇರೆ ತಂಡಗಳ ಜೊತೆ ಪ್ರಯಾಣ ಶುರುವಾಗಿ ಇವರು ಇವತ್ತಿಗೆ ಬೇಡಿಕೆಯ ಗಾಯಕಿಯಾಗಿ, ನಟಿಯಾಗಿ, ಯಕ್ಷಿಣಿಯಾಗಿ ಹೊರಹೊಮ್ಮುತ್ತಿದ್ದಾರೆ.

ತಾನು ಬಹುಮುಖ ಪ್ರತಿಭೆ ಎಂದು ಸಾಬೀತುಪಡಿಸುತ್ತಾ ಯಕ್ಷಗಾನದ ಜೊತೆ ನಾಟಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ . “ಮಾನಸ ಕಲಾವಿದರು ಪರಂಗಿಪೇಟೆ” ತಂಡದಲ್ಲಿ

“ಎಲ್ಲೆ ಗೊತ್ತಾಪುಂಡು”, “ದಿನ ದೀತಿಜಿ”, “ರಡ್ಡ್ ನಾಲಾಯಿ”, “ಕೈಕ್ಕ್ ತಿಕ್ಕುಜೆರ್” ಹೀಗೆ ಹತ್ತು ಹಲವಾರು ನಾಟಕಗಳಲ್ಲಿ ನಟನೆಗೈದು ,ಇತ್ತೀಚಿಗೆ ಬಿ.ಸಿ ರೋಡಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಯಲ್ಲಿ “ಕೈಕ್ಕ್ ತಿಕ್ಕುಜೆರ್” ನಾಟಕದಲ್ಲಿ ಖಳನಾಯಕಿಯಾಗಿ ಪಾತ್ರಕ್ಕೆ ಜೀವ ತುಂಬಿ ತೀರ್ಪುಗಾರರಿಂದ ಉತ್ತಮ ಪ್ರಶಂಸೆಗಳಿಸಿದ್ದಾರೆ. ಜೊತೆಜೊತೆಗೆ ಬಲೆತೆಲಿಪಾಲೆ ಖ್ಯಾತಿಯ “ಮಸ್ಕಿರಿ” ಕುಡ್ಲಾ ತಂಡದಲ್ಲಿ ಹಾಡುಗಾರಿಕೆಯ ಜೊತೆಗೆ ನೃತ್ಯಗಾರ್ತಿಯಾಗಿ ಮಂಗಳೂರು, ಬೆಂಗಳೂರು ಮಾತ್ರವಲ್ಲದೇ ಹಲವಾರು ಕಡೆ ಕಾರ್ಯಕ್ರಮಗಳನ್ನು ನೀಡುತ್ತಾ ಹೆಮ್ಮೆಗೆ ಪಾತ್ರರಾಗಿದ್ದಾರೆ.

“ಇಂಚರಾ ಮೆಲೋಡಿಸ್”, “ಲಹರಿ ತಂಡ”, “ಸಪ್ತಸ್ವರ ಕಡೆಗೋಳಿ”, “ಶ್ರೀ ದುರ್ಗಾ ಮೆಲೋಡೀಸ್ ಪೆರ್ಲ” ಮತ್ತು “ಪ್ರಶಾಂತ್ ಕಂಕನಾಡಿ” ಅವರ ತಂಡದಲ್ಲಿ ಸಾವಿರಾರು ವೇದಿಕೆಯ ತನ್ನ ಸುಮಧುರ ಧ್ವನಿಯ ಮೂಲಕ ಅಭಿಮಾನಿಗಳನ್ನು ಸೃಷ್ಟಿಸಿಕೊಂಡ ಹೆಮ್ಮೆ ಇವರದ್ದು.

ಗ್ರಾಮೀಣ ಪ್ರತಿಭೆಯಾಗಿರುವ ಇವರು ಭಜನೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು ಹಾಗೇ ಹಲವಾರು ಭಜನಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಭವಿಷ್ಯದ ಸಾಧಕತೆಗೆ ಅಡಿಪಾಯವನ್ನು ಹಾಕಿಕೊಂಡರು. ಈ ಪ್ರತಿಭೆಯ ಸ್ವರವನ್ನು ಆಲಿಸಿ ” ಖ್ಯಾತ ಸಾಹಿತಿ ಜಿ.ಎಸ್ ಗುರುಪುರ”ರವರು “ಗಾಣಿಗ ಸಂಗಮ” ಎಂಬ ಆಲ್ಬಮ್ ಹಾಡಿಗೆ ಧ್ವನಿಯಾಗುವ ಮೊದಲ ಅವಕಾಶವನ್ನು ನೀಡಿದರು. ಈ ಹಾಡು ಅತೀ ವೇಗವಾಗಿ ೬ ಲಕ್ಷಕ್ಕೂ ಹೆಚ್ಚಿನ ಜನರು ವೀಕ್ಷಿಸಿ ಹೆಚ್ಚಿನ ಪ್ರಶಂಸೆಗೆ ಪಾತ್ರರಾದರು. ನಂತರ ಡಮರುಗ ಮ್ಯಾಜಿಕಲ್ ಸೌಂಡ್ಸ್” ನಿರ್ಮಾಣದಲ್ಲಿ ಜಿ ಎಸ್ ಗುರುಪುರ ಸಾಹಿತ್ಯದಲ್ಲಿ ಇವರ ಗಾಯನದಲ್ಲಿ ಮೂಡಿಬಂದ ಎಲ್ಲಾ ಹಾಡುಗಳು ಯಶಸ್ವಿಯ ಹಾದಿ ಹಿಡಿದವು. 200ಕ್ಕಿಂತಲೂ ಅಧಿಕ ಭಕ್ತಿಗೀತೆ ಹಾಗೂ ರಂಗಭೂಮಿ ಗೀತೆಗಳನ್ನು ಹಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇತ್ತೀಚಿನ ದಿನದಲ್ಲಿ ಬಿಡುಗಡೆಯಾದ ತುಳುನಾಡಿನಲ್ಲಿ ಸಂಚಲನ ಮೂಡಿಸಿದ “ಕರಿಯಜ್ಜೆ , ಕಲ್ಜಿಗದ ಕಾಳಿ” ಪುರಾಲ ಕುರಲ್ ಹಾಡುಗಳು ಮತ್ತಷ್ಟು ಜನಪ್ರೀಯತೆ ತಂದು ಕೊಟ್ಟಿತು, ಇತ್ತೀಚಿನ ದಿನಗಳಲ್ಲಿ ಹಲವಾರು ಹಾಡುಗಳಿಗೆ ತಾವೇ ರಾಗ ಸಂಯೋಜನೆ ಮಾಡುತ್ತಿದು ಯಕ್ಷ ಧ್ರುವ ಸತೀಶ್ ಪಟ್ಲರಂತ ಪ್ರಸಿದ್ದ ಗಾಯಕರೊಡನೆ ಹಾಡುದರ ಜೊತೆಗೆ ಪ್ರಸಿದ್ಧ ಗಾಯಕರಿಂದ ಪ್ರಸಂಶೆ ಪಡೆದುಕೊಂಡಿದ್ದಾರೆ.

ಹಲವಾರು ಸಂಘ ಸಂಸ್ಥೆಗಳು ಪುಣ್ಯ ಕ್ಷೇತ್ರಗಳು ಇವರನ್ನು ಸನ್ಮಾನಿಸಿದೆ, ಹಲವಾರು ಪ್ರಸಿದ್ಧ ಮಾಧ್ಯಮಗಳಲ್ಲಿ ಅಥಿತಿಯಾಗಿ ನೇರ ಪ್ರಸಾದರದಲ್ಲಿ ಕಾಣಿಸಿ ಕೊಂಡು ಅಭಿಮಾನಿಗಳೊಡನೆ ಮಾತುಕತೆ ಹಂಚಿಕೊಂಡಿದ್ದಾರೆ,

ಈ ಗ್ರಾಮೀಣ ಪ್ರತಿಭೆಗೆ ಕಲಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧಿಸಬೇಕು ಎನ್ನವ ಹಂಬಲವಿದ್ದು, ಸಿನೆಮಾ ಅವಕಾಶಗಳು ಅರಸಿ ಬರುತ್ತಿವೆ ಸಂಗೀತದಲ್ಲಿ ಉನ್ನತಮಟ್ಟದಲ್ಲಿ ಸಾಧಿಸಬೇಕೆಂಬ ಕನಸು ನನಸಾಗಲಿ ಇನ್ನಷ್ಟು ಅವಕಾಶಗಳು ವೇದಿಕೆಗಳು ಲಭಿಸಲಿ ,ಪ್ರಶಸ್ತಿ ಪುರಸ್ಕಾರಗಳು ಇವರ ಮುಡಿಗೇರಲಿ ಎಂದು ಆಶಿಸೋಣ.

ನಮ್ಮ ಕಲಾವಿದರು ನಮ್ಮ ಹೆಮ್ಮೆ  ವಿಕ್ರಮ್ ಗಾಣಿಗ

By suddi9

Leave a Reply

Your email address will not be published. Required fields are marked *