ಬಂಟ್ವಾಳ : ತಾಲ್ಲೂಕಿನ ಸಮಾಜ ಸೇವಾ ಸಹಕಾರಿ ಸಂಘದ ವತಿಯಿಂದ ಸಿದ್ಧಕಟ್ಟೆಯಲ್ಲಿ ಜ.14ರಂದು ಶುಕ್ರವಾರ ನಡೆದ ೧೪ನೇ ಶಾಖೆ ಶುಭಾರಂಭ ಕಾರ್ಯಕ್ರಮದಲ್ಲಿ ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು.14btl-Siddakatte
ಪ್ರಸಕ್ತ ಜಗತ್ತಿನೆಲ್ಲೆಡೆ ಕಾಡುತ್ತಿರುವ ಕೊರೋನಾ ವೈರಸ್ ಇದರ ವಿಸ್ತರಣೆಗೆ ರಾಜ್ಯದಲ್ಲಿ ಕೂಡಾ ಕೆಲವೆಡೆ ನಡೆಯುತ್ತಿರುವ ಪರೋಕ್ಷ ಪ್ರಯತ್ನದಿಂದ ಇಲ್ಲಿನ ಆರ್ಥಿಕ ವ್ಯವಹಾರ ಕುಂಠಿತಗೊಳ್ಳಲಿದೆ. ಇದಕ್ಕಾಗಿ ಎಲ್ಲರೂ ಕೋವಿಡ್ ನಿಯಮಾವಳಿ ಪಾಲಿಸಿ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಸಲಹೆ ನೀಡಿದ್ದಾರೆ.

ಇಲ್ಲಿನ ಸಮಾಜ ಸೇವಾ ಸಹಕಾರಿ ಸಂಘದ ವತಿಯಿಂದ ಸಿದ್ಧಕಟ್ಟೆಯಲ್ಲಿ ಶುಕ್ರವಾರ ನಡೆದ ೧೪ನೇ ಶಾಖೆ ಶುಭಾರಂಭ ಕಾರ್ಯಕ್ರಮದಲ್ಲಿ ವರು ಆಶೀರ್ವಚನ ನೀಡಿದರು. ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಹಿಂದುಳಿದ ವರ್ಗದವರು ಆರ್ಥಿಕ ಸಂಸ್ಥೆ ಜೊತೆಗೆ ಶಿಕ್ಷಣ ಸಂಸ್ಥೆ ಆರಂಭಿಸುವ ಮೂಲಕ ಸದೃಢವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿ ಹುಟ್ಟಿದ ಹಲವು ರಾಷ್ಟ್ರೀಕೃತ ಬ್ಯಾಂಕ್ ವಿಲೀನಗೊಂಡು ದುರ್ಬಲಗೊಂಡ ಪರಿಣಾಮ ಸಹಕಾರಿ ಸಂಸ್ಥೆಗಳ ಬಗ್ಗೆ ಜನತೆ ಒಲವು ತೋರುತ್ತಿದ್ದಾರೆ ಎಂದರು.

ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಕಲ್ಕುರಿ ಜುಮ್ಮ ಮಸೀದಿ ಧರ್ಮಗುರು ಗೌಸ್ ಮೊಹಿಯುದ್ದಿನ್ ಪೈಝಿ, ಸಂಗಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಪೂಜಾರಿ ಹಲಕ್ಕೆ, ಉಪಾಧ್ಯಕ್ಷೆ ವಿಮಲಾ ಮೋಹನ್, ಮಂಗಳೂರು ಕುಲಾಲ ಮಾತೃಸಂಘ ಅಧ್ಯಕ್ಷ ಮಯೂರ್ ಉಳ್ಳಾಲ್ ಶುಭ ಹಾರೈಸಿದರು.

ಸಂಗಬೆಟ್ಟು ಕ್ಷೇತ್ರದ ಆಡಳಿತ ಮೊಕ್ತೇಸರ ಚಂದ್ರಹಾಸ ಶೆಟ್ಟಿಗಾರ್, ಸಿದ್ದಕಟ್ಟೆ ಕುಲಾಲ ಸಂಘದ ಅಧ್ಯಕ್ಷ ಸುರೇಶ್ ಕುಲಾಲ್, ನಿರ್ದೇಶಕರಾದ ವಿಶ್ವನಾಥ ಕೆ.ಬಿ., ರಮೇಶ್ ಸಾಲ್ಯಾನ್, ಅರುಣ್ ಕುಮಾರ್, ನಾಗೇಶ್ ಬಿ., ಎಂ.ವಾಮನ ಟೈಲರ್, ಸುರೇಶ್ ಎನ್., ಸತೀಶ, ವಿ.ವಿಜಯ ಕುಮಾರ್, ಜಯಂತಿ, ವಿದ್ಯಾ, ಜನಾರ್ದನ ಬೊಂಡಾಲ, ಜಗನ್ನಿವಾಸ ಗೌಡ, ಎಂ.ಕೆ.ಗಣೇಶ ಸಮಗಾರ, ವಿಜಯಲಕ್ಷ್ಮಿ, ಶಾಖಾ ವ್ಯವಸ್ಥಾಪಕಿ ಶೀಲಾವತಿ, ಇದ್ದರು.

ಕಟ್ಟಡ ಮಾಲೀಕ ದುರ್ಗಾದಾಸ್ ಶೆಟ್ಟಿ ಕರೆಂಕಿಜೆ, ಜಯ ಮೂಲ್ಯ, ಸೀತಾರಾಮ ಬಂಗೇರ ಇವರನ್ನು ಸನ್ಮಾನಿಸಲಾಯಿತು. ಸಿಇಒ ಭೋಜ ಮೂಲ್ಯ ಪ್ರಾಸ್ತಾವಿಕ ಮಾತನಾಡಿ, ವ್ಯವಸ್ಥಾಪಕ ಮೋಹನ್ ಎಂ.ಕೆ. ಸ್ವಸಹಾಯ ಸಂಘಗಳನ್ನು ಪರಿಚಯಿಸಿದರು. ಸಂಘದ ಉಪಾಧ್ಯಕ್ಷ ಪದ್ಮನಾಭ ವಿ. ಸ್ವಾಗತಿಸಿ, ನಿರ್ದೇಶಕ ಬಿ.ರಮೇಶ್ ಸಾಲ್ಯಾನ್ ವಂದಿಸಿದರು. ರಂಗ ಕಲಾವಿದ ಎಚ್ಕೆ ನಯನಾಡು ನಿರೂಪಿಸಿದರು.

By suddi9

Leave a Reply

Your email address will not be published. Required fields are marked *