ಮಂಗಳೂರು: ಬಿಜೆಪಿ ಯಾವ ಮಹಾ ಸಾಧನೆಯನ್ನು ಮುಂದಿಟ್ಟುಕೊಂಡು ಮತ ಪಡೆಯಲು ಸಾಧ್ಯ ಗ್ಯಾಸ್, ಡಿಸೇಲ್, ಪೆಟ್ರೋಲ್ ಸಹಿತ ದಿನ ಬಳಕೆ ವಸ್ತುಗಳ ಬೆಲೆಯನ್ನು ಗಗನದೆತ್ತರಕ್ಕೆ ಏರಿಸಿದ್ದೇ ನಾವು ಮಾಡಿದ ಸಾಧನೆ ಎಂಬುದನ್ನು ಬಿಂಬಿಸಿ ಜನರಿಂದ ಮತ ಪಡೆಯುತ್ತಾರೆಯೇ. ಜನ ಬಳಿ ಹೋಗಿ ಮತ ಕೇಳೋ ಹಕ್ಕನೇ ಕಳೆದುಕೊಂಡಿರುವ ಬಿಜೆಪಿ ಧರ್ಮಗಳ ಮಧ್ಯೆ ಕೋಮು ದ್ವೇಷ ಹುಟ್ಟು ಹಾಕಿ ಯುವಕರನ್ನು ದಾರಿ ತಪ್ಪಿಸಿ ಮತ ಕೇಳುವ ದಾರಿ ಹೊರತು ಪಡಿಸಿ ಅನ್ಯ ದಾರಿಯೇ ಅವರಿಗಿಲ್ಲ ಎಂಬುದಾಗಿ ಕಾಂಗ್ರೆಸ್ ಮುಖಂಡ ಬೆಳಪು ದೇವಿ ಪ್ರಸಾದ್ ಶೆಟ್ಟಿ ವ್ಯಂಗವಾಡಿದ್ದಾರೆ.vlcsnap-2021-12-15-16h45m28s349

ಕಾಪು ಪುರಸಭೆಯ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಪಕ್ಷದಡಿಯಲ್ಲಿ ಯಾವುದೇ ಬಿನ್ನಾಭಿಪ್ರಾಯವಿಲ್ಲದೆ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಸಮರ್ಥ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದೆ. ನಮ್ಮ ಪಕ್ಷದ ಪುರಸಭೆಯಲ್ಲಿ ಅಧಿಕಾರಕ್ಕೆ ಬಂದರೆ ಜನರನ್ನು ಸುಲಿಗೆ ರೀತಿಯಲ್ಲಿ ಪಡೆಯುತ್ತಿರುವ ತೆರಿಗೆಯನ್ನು ಅರ್ಧಕ್ಕರ್ಧ ಕಡಿಯಗೊಳಿಸಲಾಗುವುದು. ಜನರ ಯಾವುದೇ ಕೆಲಸ ಕಾರ್ಯಗಳನ್ನು ಸುಲಭ ರೀತಿಯಲ್ಲಿ ನೆರವೇರಿಸಲು ಎಲ್ಲಾ ವ್ಯವಸ್ಥೆ ಕಲ್ಪಿಸಲಾಗುವುದು. ನಮಗೆ ಅಧಿಕಾರಕ್ಕಿಂದಲೂ ಜನರ ಕಷ್ಟ ಕಾರ್ಪಣ್ಯಗಳಿಗೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ನೇತೃತ್ವದಲ್ಲಿ ಸ್ಪಂದಿಸುವ ಅವಕಾಶಕ್ಕಾಗಿ ನಾವು ಹಂಬಲಿಸುತ್ತಿದ್ದೇವೆ.

By suddi9

Leave a Reply

Your email address will not be published. Required fields are marked *