ವಿಟ್ಲ : ಶ್ರೀ ವೆಂಕಟರಮಣ ಭಜನಾ ಮಂದಿರ ಅರಳಿವೃಂದ ಕಡಂಬು ಇದರ ಜೀರ್ಣೋದ್ಧಾರ ಸಮಿತಿ ವತಿಯಿಂದ ಕಡಂಬು ಗ್ರಾಮ ದೇವರಾದ ಶ್ರೀವಿಷ್ಣು ಮೂರ್ತಿ ಮತ್ತು ಸೀಮೆ ದೇವರಾದ ಶ್ರೀ ಪಂಚಲಿಂಗೇಶ್ವರ ದೇವರಿಗೆ ತಾಂಬೂಲ ಪ್ರಶ್ನೆಯಲ್ಲಿ ಕಂಡುಕೊಂಡಂತೆ, ಹಾಲು ಪಾಯಸ, ಅಲಂಕಾರ ಸೇವೆ ರುದ್ರಾಭಿಷೇಕ, ಸರ್ವ ಸೇವೆ, ಪೂಜಾದಿ ಗಳನ್ನು ನೆರವೇರಿಸಲಾಯಿತು.WhatsApp Image 2021-11-29 at 6.40.52 PM

ಈ ಸಂದರ್ಭದಲ್ಲಿ ಮಂದಿರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸತೀಶ ಆಳ್ವ ಇರಾ ಬಾಳಿಕೆ, ಗೌರವ ಅಧ್ಯಕ್ಷರಾದ ವಿಟ್ಲ ಅರಮನೆಯ ಕೃಷ್ಣಯ್ಯ ಬಲ್ಲಾಳ್ ಸಮಿತಿಯ ಉಪಾಧ್ಯಕ್ಷರಾದ ಜಿ ಎನ್ ನೋಣಯ್ಯ, ಜಗನ್ನಾಥ ಕಾಸರಗೋಡು ಗೌರವ ಸಲಹೆಗಾರರಾದ ನಾರಾಯಣ ಭಟ್ ಮೂರ್ಕಜೆ,ಪ್ರಧಾನ ಕಾರ್ಯದರ್ಶಿಗಳಾದ ರಮೇಶ ಕಡಂಬು ಇನ್ನಿತರ ಪದಾಧಿಕಾರಿಗಳು, ಸಮಿತಿಯ ಸದಸ್ಯರು, ಭಜನಾ ಮಂಡಳಿಯ ಅಧ್ಯಕ್ಷರಾದ ಆನಂದ ಸೊರಂಗದ ಮೂಲೆ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಹಾಮಾರಿ ಕೊರೊನಾ ದಿಂದ ಮುಕ್ತಿ ನೀಡುವಂತೆ ಮತ್ತು ಮುಂದೆ ಜರುಗಲಿರುವ ಶ್ರೀ ದೇವರ ಜಾತ್ರೆ,ಉತ್ಸವಾದಿಗಳು ನಿರ್ವಿಘ್ನವಾಗಿ ನೆರವೇರುವಂತೆ ಪಂಚಲಿಂಗೇಶ್ವರನ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಯನ್ನು  ಸಲ್ಲಿಸಲಾಯಿತು.

By suddi9

Leave a Reply

Your email address will not be published. Required fields are marked *