ಪೊಳಲಿ: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಪೊಳಲಿಯ ರಾಜರಾಜೇಶ್ವರೀ ಸಾನಿಧ್ಯದಲ್ಲಿ ನ.೪ರಂದು ದೊಡ್ಡರಂಗಪೂಜೆ ನಡೆಯಿತು. ನಂತರ ದೇವರ ಉತ್ಸವ ಬಲಿ ನೆರವೇರಿದ ಬಳಿಕ ಪರಿವಾರ ದೈವಗಳಿಗೆ ಫಲಹಾರ ಸೇವೆಯನ್ನು ಮಾಡಿ ಗಾಯತ್ರಿ ಪೂಜೆ ನೆರವೇರಿತು.
ಪೂಜಾ ವಿಧಿವಿಧಾನಗಳನ್ನು ಸುಬ್ರಹ್ಮಣ್ಯ ತಂತ್ರಿ, ವೆಂಕಟೇಶ್ ತಂತ್ರಿ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ಕೆ. ರಾಮ್ ಭಟ್, ಪರಮೇಶ್ವರ ಭಟ್, ಮಾಧವ ಮಯ್ಯ, ವಿಷ್ಣುಮೂರ್ತಿ ನಟ್ಟೋಜ ನೆರವೇರಿಸಿದರು.
ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಉಳಿಪಾಡಿಗುತ್ತು ಅರುಣ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

