Published On: Mon, Nov 1st, 2021

ಅಯೋಧ್ಯ ಬಲಿದಾನ ದಿವಸ್ ಪ್ರಯುಕ್ತ ರಕ್ತದಾನ ಶಿಬಿರ

ಮಂಗಳೂರು : ಆಂಜನೇಯ ಶಾಖೆಯ ವತಿಯಿಂದ ಪ್ರತೀ ವರ್ಷದಂತೆ ಈ ವರ್ಷವೂ 9ನೇ ವರ್ಷದ ರಕ್ತದಾನ ಶಿಬಿರವನ್ನು ಪಳನೀರು ಅಂಗನವಾಡಿ ಕೇಂದ್ರದಲ್ಲಿ  ಅ.31ರಂದು  ಭಾನುವಾರ ನಗರದ ಪ್ರತಿಷ್ಠಿತ ಕೆ.ಎಮ್.ಸಿ ಆಸ್ಪತ್ರೆಯ ಸಹಯೋಗದೊಂದಿಗೆ ಪ್ರಖಂಡದ ಪ್ರಮುಖರ ಸಮ್ಮುಖದಲ್ಲಿ ನಡೆಯಿತು.IMG_20211031_105934
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸಂಚಾಲಕರಾದ ಪುನೀತ್ ಅತ್ತಾವರ್ ಅವರು ಬಜರಂಗದಳವು ಸೇವಾ ಸುರಕ್ಷಾ ಸಂಸ್ಕಾರಗಳೆಂಬ ಮೂರು ಧ್ಯೇಯಗಳೊಂದಿಗೆ ಸಮಾಜದಲ್ಲಿ ಕೆಲಸ ಮಾಡುತ್ತಿದ್ದು ಅಯೋಧ್ಯೆಯ ರಾಮಜನ್ಮಭೂಮಿ ಆಂದೋಲನದಲ್ಲಿ ಬಲಿದಾನಗೈದಿದ್ದ ಬಜರಂಗದಳದ ಕಾರ್ಯಕರ್ತರಾದ ಕೊಠಾರಿ ಸಹೋದರರ ಸವಿನೆನಪಿಗಾಗಿ ಸೇವಾರೂಪದಲ್ಲಿ ರಕ್ತದಾನ ಶಿಬಿರಗಳು ದೇಶದಾದ್ಯಂತ ನಡೆಯುತ್ತಿದೆ. ಇಂತಹ ಇನ್ನಷ್ಟು ಕಾರ್ಯಗಳು ಆಂಜನೇಯ ಶಾಖೆಯಿಂದ ನೆರವೇರಲಿ ಎಂದು ಅಭಿಪ್ರಾಯಪಟ್ಟರು. IMG_20211031_111301
ಉದ್ಘಾಟನಾ ಸಮಾರಂಭದ ನಂತರ ಕಾವೂರು ಪ್ರಖಂಡದ ವಿವಿಧ ಘಟಕಗಳ ಸುಮಾರು 80 ಜನ ಕಾರ್ಯಕರ್ತರು ರಕ್ತದಾನವನ್ನು ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸುರಕ್ಷಾ ಪ್ರಮುಖರಾದ ಚೇತನ್ ಅಸೈಗೋಳಿ,ಕಾವೂರು ಪ್ರಖಂಡ ಅಧ್ಯಕ್ಷರಾದ ಶಿವರಾಜ್ ಜ್ಯೋತಿನಗರ,ಸಂಚಾಲಕರಾದ ಅಜಿತ್ ಕಾವೂರು, ಜಿಲ್ಲಾ ಸಹ  ಸೇವಾ ಕಾರ್ತಿಕ್ ಮರೋಳಿ ಪ್ರಮುಖರಾದ ದಿಲೀಪ್ ಕುಂಜತ್ತಬೈಲ್,ವಿಕೇಶ್ ಶಾಂತಿನಗರ ,ಆಂಜನೇಯ ಶಾಖೆಯ ಸಂಚಾಲಕರಾದ ರಮೇಶ್,ಸ್ಥಳೀಯರಾದ,ಕೃಷ್ಣ ಶೆಟ್ಟಿ,ಪಳನೀರು ಫ್ರೆಂಡ್ಸ್ ಸರ್ಕಲ್ ನ ಅಧ್ಯಕ್ಷರಾದ ರಾಮ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.ಕಾವೂರು ಪ್ರಖಂಡ ಸಹಸಂಚಾಲಕರಾದ ಚೇತನ್ ಮರಕಡ ಕಾರ್ಯಕ್ರಮವನ್ನು ನಿರೂಪಿಸಿದರು.IMG-20211031-WA0062

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter