ವಿಟ್ಲ: ವಿಠಲ ವಿದ್ಯಾ ಸಂಘದ ಪ್ರೌಢ ಶಾಲಾ ವಿಭಾಗದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ೧೫೨ ಮಕ್ಕಳ ಖರ್ಚಿನ ದೇಣಿಗೆಯ ರೂ ೨,೨೮,೦೦೦ದ ಚೆಕ್ಕನ್ನು ವಿಠಲ ವಿದ್ಯಾ ಸಂಘದ ಕೋಶಾಧಿಕಾರಿ ವಿದ್ಯಾ ಪೋಷಕ ಸಮಿತಿ ಅಧ್ಯಕ್ಷ ಬಾಬು ಕೊಪ್ಪಳರವರಿಗೆ ಹಸ್ತಾಂತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲೆಯ ವಲಯಾಧ್ಯಕ್ಷ ಗಂಗಾಧರ್ ರೈ ಮಾಣಿ, ವಿಟ್ಲ ಲಯನ್ಸ್ ಕ್ಲಬ್ ನ ಅಧ್ಯಕ್ಷ ಮೋನಪ್ಪ ಗೌಡ, ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್, ಕೋಶಾಧಿಕಾರಿ ಗಂಗಾಧರ್, ನಿಕಟಪೂರ್ವ ಪ್ರಾಂತೀಯ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ, ಸದಸ್ಯರುಗಳಾದ ರಮೇಶ್ ಬಾಯಾರು, ಇಕ್ಬಾಲ್ ಹಾನೆಸ್ಟ್, ಮಂಗೇಶ್ ಭಟ್, ಹರ್ಷಿತ್, ಪುಷ್ಪಲತಾ ಮತ್ತು ಜಲಜಾಕ್ಷಿ, ವಿಠಲ ವಿದ್ಯಾ ಸಂಘದ ಸದಸ್ಯರುಗಳಾದ ನಿತ್ಯಾನಂದ ನಾಯಕ್ ಮತ್ತು ಪದ್ಮಯ್ಯ ಗೌಡ ವೇದಿಕಯಲ್ಲಿದ್ದರು.
ವಿಠಲ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್ ಪ್ರಸ್ತಾವಿಸಿ ಸ್ವಾಗತಿಸಿದರು. ರಮೇಶ್ ಬಿ ಕೆ ವಂದಿಸಿದರು. ಮೋಹನ್ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥತರಿದ್ದರು.
