ಬಂಟ್ವಾಳ: ಸಂಸ್ಕಾರ ಭಾರತಿ ಬಂಟ್ವಾಳ ಇದರ ವತಿಯಿಂದ ಗುರುವಂದನ ಕಾರ್ಯಕ್ರಮ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಮುಖ್ಯ ಅತಿಥಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಮಾತನಾಡಿ ಮನಸ್ಸಿನ ಮಟ್ಟದಿಂದ ಬುದ್ದಿಯ ಮಟ್ಟಕ್ಕೆ ಏರುವುದೇ ಗುರುತ್ವ, ಇಂತಹ ಕೆಲಸವನ್ನು ಸಂಸ್ಕಾರ ಭಾರತಿ ಮಾಡಿಕೊಂಡು ಬರುತ್ತಿದೆ ಎಂದರು. ಇಂದಿನ ಶಿಕ್ಷಣದಿಂದ ವಿದ್ಯಾವಂತ ರಾಗುತ್ತಿದ್ದೇವೆ ಆದರೆ ಹೃದಯವಂತರಾನ್ನಾಗಿಸುವ ಕೆಲಸ ಈಗಿನ ಶಿಕ್ಷಣಕ್ಕೆ ಸಾಧ್ಯವಾಗುತ್ತಿಲ್ಲ ಎಂದರು.
ವೇದವೇ ಹಿಂದೂ ಧರ್ಮದ ಮೂಲ ಗ್ರಂಥ. ಹಿಂದೂ ಧರ್ಮ ನಿಂತಿರುವುದು ವೇದಗಳ ಆಧಾರದಲ್ಲಿ. ರಾಮನ ಆದರ್ಶದ ಒಂದು ಅಂಶವನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡಾಗ ಅದು ರಾಮನ ಪೂಜೆ ಮಾಡಿದಂತಾಗುತ್ತದೆ. ಈ ದೇಶವನ್ನು ಪೂಜೆ ಮಾಡಿದರೆ ಅದು ರಾಮನ ಪೂಜೆಯಾಗುತ್ತದೆ ಎಂದರು.
ಸಂಸ್ಕಾರ ಭಾರತಿ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಚಂದ್ರಶೇಖರ ಕೆ.ಶೆಟ್ಟಿ ಮಾತನಾಡಿದರು. ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ದೇಜಪ್ಪ ಬಾಚಕೆರೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಧಕರಾದ ಸಮಾಜ ಸೇವಕ ಶೀನ ಶೆಟ್ಟಿ ಹಿರಿಯ ಗ್ರಾಮೀಣ ಪ್ರಸೂತಿ ತಜ್ಞೆ ಗೌರಿ ಪಾಲ್ತಜೆ, ಅವರನ್ನು ಸನ್ಮಾನಿಸಲಾಯಿತು. ವಿಷ ವೈದ್ಯ ಶೀನ ಪೂಜಾರಿ, ಹಿರಿಯ ಕಲಾವಿದ ಪ್ರೇಮನಂದ ವಿಟ್ಲ ಅವರನ್ನು ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಲಾಯಿತು.
ಬಿಜೆಪಿ ಕಲೆ ಮತ್ತ ಸಾಂಸ್ಕೃತಿಕ ಪ್ರಕೋಷ್ಠ ಜಿಲ್ಲಾ ಸಂಚಾಲಕ ಅಶೋಕ್ ಶೆಟ್ಟಿ ಸರಪಾಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಸಂಚಾಲಕರಾದ ಮಂಜು ವಿಟ್ಲ ವಂದಿಸಿದರು. ತಾರಾನಾಥ ಕೊಟ್ಟಾರಿ ತೇವು ಕಾರ್ಯಕ್ರಮ ನಿರೂಪಿಸಿದರು. ಜನಾರ್ದನ ಅಮ್ಮುಂಜೆ, ವಿಜಯ ಶೆಟ್ಟಿ, ಸಂಕಪ್ಪ ಶೆಟ್ಟಿ, ವಿದ್ವಾನ್ ವಿಜಯ ಕೃಷ್ಣ ಐತಾಳ್ ಸನ್ಮಾನ ಪತ್ರ ವಾಚಿಸಿದರು. ಇತ್ತೀಚೆಗೆ ನಿಧನರಾದ ಸಂಸ್ಕಾರ ಭಾರತೀಯ ಕಾರ್ಯದರ್ಶಿ ಅಭಯಚಂದ್ರ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾರ್ಯಕ್ರಮದ ಪೂರ್ವಭಾವಿಯಾಗಿ ಡಾ. ವಾರಿಜ ನಿರ್ಬೈಲ್ ಹಾಗೂ ಜಯಾನಂದ ಪೆರಾಜೆ ಅವರಿಂದ ಗಮಕ ವಾಚನ ನಡೆಯಿತು. ಚಿನ್ಮಯ ಶೆಟ್ಟಿ ಮತ್ತು ಸಂಜನ ಮೊಡಂಕಾಪು ಅವರಿಂದ ನೃತ್ಯ ಪ್ರದರ್ಶನ ನಡೆಯಿತು.
ಹಿರಿಯ ಸಾಧಕರಾದ ಸಮಾಜ ಸೇವಕ ಶೀನ ಶೆಟ್ಟಿ ಹಿರಿಯ ಗ್ರಾಮೀಣ ಪ್ರಸೂತಿ ತಜ್ಞೆ ಗೌರಿ ಪಾಲ್ತಜೆ, ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯ ನಾರಾಯಣ ಭಟ್, ದೇಜಪ್ಪ ಬಾಚಕೆರೆ, ಅಶೋಕ್ ಸರಪಾಡಿ ಉಪಸ್ಥಿತರಿದ್ದರು.
