ಬಂಟ್ವಾಳ: ತಾಂಬೂಲ ಕಲಾವಿದರು ಪುಂಜಾಲಕಟ್ಟೆ, ಕುಡ್ಲ ನಾಟಕ ತಂಡದ 5ನೇ ಕಲಾಕೃತಿ ಅಂಗಲಾಪು ತುಳು ನಾಟಕದ ಮುಹೂರ್ತ ಕಾರ್ಯಕ್ರಮ ಪುಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಮಂಗಳವಾರ ಜರಗಿತು.WhatsApp Image 2021-10-19 at 5.21.30 PM

ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪ್ರಾರ್ಥನೆ ನಡೆಸಿ ನಾಟಕದ ಮುಹೂರ್ತ ನೆರವೇರಿಸಲಾಯಿತು. ಬಳಿಕ ಜಿ.ಪಂ. ನಿಕಟಪೂರ್ವ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಕೊರೊನಾ ಮಹಾಮಾರಿಯ ಸಂಕಷ್ಟದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದು, ಕಲಾವಿದರ ಪರಿಸ್ಥಿತಿ ಶೋಚನೀಯವಾಗಿದೆ. ಈ ನಿಟ್ಟಿನಲ್ಲಿ ನಾಟಕ ಪ್ರದರ್ಶನಗಳಿಗೆ ಹೆಚ್ಚು ಅವಕಾಶವಾಗಲಿ ಎಂದು ಹೇಳಿದರು. ಕಜೆಕಾರು ವ್ಯವಸಾಯಿಕ ಸಹಕಾರಿ ಸಂಘದ ಉಪಾಧ್ಯಕ್ಷ ರೋಹಿನಾಥ್ ಕಂರ್ಬಡ್ಕ, ಮಿಥುನ್ ಪ್ರಭು, ಹಿರಿಯ ರಂಗಭೂ

WhatsApp Image 2021-10-19 at 5.21.31 PM (1)ಮಿ ಕಲಾವಿದ ಡಿ.ಎಸ್.ಬೋಳೂರ್, ನಾಟಕ ಕರ್ತೃ, ನಿರ್ದೇಶಕ ರಂಗಚಾಣಕ್ಯ ರಾಘವೇಂದ್ರ ಕಾರಂತ, ಸಂಗೀತ ನಿರ್ದೇಶಕ ತಂಗವೇಲು ಕೊಯಿಲ, ಪ್ರಸಾಧನ ಕಲಾವಿದ ಪ್ರಭಾಕರ ಶೆಟ್ಟಿ, ಸಂಚಾಲಕ ಮೇಧಾವಿ, ಕಲಾವಿದರಾದ ರತ್ನದೇವ್ ಪುಂಜಾಲಕಟ್ಟೆ, ಜಯರಾಜ್ ಅತ್ತಾಜೆ, ಯಶೋಧರ ನೆಲ್ಲಿಗುಡ್ಡೆ, ನಿತೇಶ್ ರಾಯಿ, ರಚನ್ ಆಲಾಡಿ,ಚೇತನ್ ಕೋಡ್ಲಕ್ಕೆ, ಕುಶಾಲಪ್ಪ ಗೌಡ, ರಫೀಕ್ ನೆಲ್ಲಿಗುಡ್ಡೆ, ಅಶೋಕ್, ಶೋನಿತ್‌ರಾಜ್, ಕಾವ್ಯಶ್ರೀ ನಾಕುನಾಡು, ಸುರಕ್ಷಾ ನೆಲ್ಲಿಗುಡ್ಡೆ, ವಾಣಿ ಉಪಸ್ಥಿತರಿದ್ದರು.WhatsApp Image 2021-10-19 at 5.21.31 PM

By suddi9

Leave a Reply

Your email address will not be published. Required fields are marked *