Published On: Fri, Oct 8th, 2021

“ಯಕ್ಷಕಲಾ ಪೊಳಲಿ” ಇದರ 26 ನೇ ವಧ್ಯುಂತ್ಯುತ್ಸವದ ಅಂಗವಾಗಿ ಕಲಿಕೀಚಕ ಮಹಾಬ್ರಾಹ್ಮಣ ಯಕ್ಷಗಾನ ಬಯಲಾಟ

ಪೊಳಲಿ: ಶ್ರೀ ಕ್ಷೇತ್ರ ಪೊಳಲಿಯ ಪವಿತ್ರ ಸ್ಥಳದಲ್ಲಿ ಸಂಜನಿಸಿದ “ಯಕ್ಷಕಲಾ ಪೊಳಲಿ” ಎಂಬ ಸಂಸ್ಥೆಯ 26 ನೇ ವಧ್ಯುಂತ್ಯುತ್ಸವವು ಅ.9ರಂದು ಶನಿವಾರ ಸಂಜೆ ಘಂಟೆ 6ರಿಂದ ಮರುದಿನ ಬೆಳಿಗ್ಗೆ ಘಂಟೆ 6 ರವರೆಗೆ “ಪೊಳಲಿ ಯಕ್ಷೋತ್ಸವ -2021 “ಎಂಬ ಶಿರೋನಾಮೆಯಲ್ಲಿ ಶ್ರೀಕ್ಷೇತ್ರ ಪೊಳಲಿಯ ರಾಜಾಂಗಣದಲ್ಲಿ ಸಂಪನ್ನಗೊಳ್ಳಲಿದೆ.01ಯಕ್ಷಗಾನ ಕ್ಷೇತ್ರದಲ್ಲಿ ಸಾಕಷ್ಟು ಕಲಾಸೇವೆಯನ್ನು ಗೈದಿರುವ ಈ ಸಂಸ್ಥೆಯು ಕಳೆದ 26 ವರ್ಷಗಳಲ್ಲಿ 25 ಯಕ್ಷಗಾನ ಬಯಲಾಟ, ಗಾನವೈಭವ, ತಾಳಮದ್ದಳೆ, ಕೀರ್ತಿಶೇಷ ಕಲಾವಿದರ ಸಂಸ್ಕರಣೆ, ಸಾಧಕರಿಗೆ ಗೌರವಾರ್ಪಣೆ ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 150 ಕಲಾವಿದರನ್ನು  ಗೌರವನಿಧಿಯೊಂದಿಗೆ ಅರ್ಥಪೂರ್ಣವಾಗಿ ಸಮ್ಮಾನಿಸಿದೆ.

26ನೇ ವರ್ಧಂತ್ಯುತ್ಸವದಲ್ಲಿ ಕೀರ್ತಿಶೇಷ ಬೆಟ್ಟಕೆರೆ ಪುರುಷೋತ್ತಮ ಪೂಂಜ , ಸಂಪಾಜೆ ಶೀನಪ್ಪ ರೈ ಪುತ್ತೂರು ಶ್ರೀಧರ ಭಂಡಾರಿ ಇವರ ಸಂಸ್ಮರಣೆ, ಯುವ ಗಾಯಕರಾದ ಶ್ರೀ ಮನೀಶ್ ಕುತ್ತಾರ್ ಹಾಗೂ ಚೈತ್ರ ಕಲ್ಲಡ್ಕ ಇವರಿಗೆ ಗೌರವಾರ್ಪಣೆ ಹಾಗೂ ಯಕ್ಷಗಾನ ಕಲಾವಿದರಾದ ಶ್ರೀ ಮುಳಿಯಾಳ ಭೀಮ ಭಟ್ – ಶ್ರೀ ತಾರಾನಾಥ ವರ್ಕಾಡಿ, ಶ್ರೀಕೃಷ್ಣ ಪ್ರಕಾಶ್ ಉಳಿತ್ತಾಯ ಪೆರ್ಮುದೆ, ಶ್ರೀ ಶಶಿಕಾಂತ ಶೆಟ್ಟಿ ಕಾರ್ಕಳ, ಶ್ರೀ ಗಿರೀಶ್ ರೈ ಕಕ್ಕೆಪದವು ಇವರಿಗೆ ಸಂಮ್ಮಾನ ಕಾರ್ಯಕ್ರಮ ಜರುಗಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಜಿಲ್ಲೆಯ ಪ್ರಸಿದ್ಧ ಕೂಡುವಿಕೆಯಿಂದ ಕೀಚಕವಧೆ ಮಹಾಬ್ರಾಹ್ಮಣ ಯಕ್ಷಗಾನ ಬಯಲಾಟ ಜರುಗಲಿದೆ. ಸರಕಾರದ ಆದೇಶದಂತೆ ಕೋವಿಡ್ ನಿಯಮವನ್ನು ಪಾಲಿಸುತ್ತಾ ಜರಗುವ ಈ ಕಾರ್ಯಕ್ರಮವು ನಮ್ಮ ಕುಡ್ಲ ಚಾನೆಲ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ ಎಂದು ಸಂಸ್ಥೆಯ ಸಂಚಾಲಕ ಶ್ರೀ ವೆಂಕಟೇಶ್ ನಾವಡ ಪೊಳಲಿ, ಸಂಸ್ಥಾಪಕ ಶ್ರೀ ಅ.ನ.ಭ ಪೊಳಲಿ ಹಾಗೂ ಸಂಯೋಜಕರಾದ ಶ್ರೀ.ಬಿ. ಜನಾರ್ಧನ ಅಮ್ಮುಂಜೆ ತಿಳಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter