ಕಲ್ಲಡ್ಕ: ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲದಲ್ಲಿ ಅಂತಿಮ ವರ್ಷದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ದೀಪಪ್ರದಾನದಲ್ಲಿ ಮಾತನಾಡುತ್ತ ವಿದ್ಯಾರ್ಥಿ ಜೀವನ ನಿತ್ಯನಿರಂತರ ಶೋಧನೆಯ , ಆಂತರ್ಯದ ಸತ್ಯದರ್ಶನ ಮಾಡುವ ಕಡೆಗೆ ನಮ್ಮ ಯೋಚನೆಗಳು ಸಾಗಬೇಕು. ನಾನು ಎಂಬ ಸ್ವಾರ್ಥ ನಾಶವಾಗಿ , ನಾವು ನಮ್ಮದು ಎನ್ನುವ ವಿಶಾಲ ಮನಸ್ಸು ನಮ್ಮದಾಗಬೇಕು ಎಂದರು.

daf93c4c-59bd-4fa2-80da-84e9a66ee90d (1)

ಕಾರ್ಯಕ್ರಮದಲ್ಲಿ ವಿಟ್ಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ರಾಷ್ಟ್ರ ಸೇವಿಕಾ ಸಮಿತಿಯ ಹಿರಿಯ ಕಾರ್ಯಕರ್ತೆ ಶ್ರೀಮತಿ ಕಮಲಾ ಪ್ರಭಾಕರ್ ಭಟ್ ಕಲ್ಲಡ್ಕ, ಪದವಿ ವಿಭಾಗ ಕಾಲೇಜ್ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಪೂರ್ಣಶ್ರೀ ಕುರ್ನಾಡ್, ಸದಸ್ಯರಾದ ಗಣೇಶ್ ಭಟ್ ಬರಿಮಾರು, ಶ್ರೀರಾಮ ವಿದ್ಯಾಕೇಂದ್ರದ ಸದಸ್ಯರಾದ ಗೋಪಾಲ್ ಶೆಣೈ, ಪ್ರಾಚಾರ್ಯರಾದ ಕೃಷ್ಣಪ್ರಸಾದ್ ಕಾಯರ್ ಕಟ್ಟೆ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶಿವಪ್ರಸಾದ್, ಸದಸ್ಯರಾದ ಶ್ರೀಮತಿ ಪವಿತ್ರ, ಕು. ಅನುಷ, ಕು .ದೀಪಿಕಾ, ಅಕ್ಷಯ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಾಚಾರ್ಯರಾದ ಕೃಷ್ಣಪ್ರಸಾದ್ ಸ್ವಾಗತಿಸಿ, ಉಪನ್ಯಾಸಕ ಸಂದೀಪ್ ವಂದಿಸಿ, ಕು.ಸ್ವರ್ಣಗೌರಿ ಕಾರ್ಯಕ್ರಮ ನಿರೂಪಿಸಿದರು

By suddi9

Leave a Reply

Your email address will not be published. Required fields are marked *