ಬಂಟ್ವಾಳ : ತಾಲ್ಲೂಕಿನ ಚೆನ್ನೈತ್ತೋಡಿ ಗ್ರಾಮದ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾನುವಾರ ನಡೆದ ‘ನಮ್ಮ ನಡೆ ಬೂತ್ ಕಡೆ’ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಬೂತ್ ಕಾಂಗ್ರೆಸ್ ಅಧ್ಯಕ್ಷರ ಮನೆಯಲ್ಲಿ ತೆಂಗಿನ ಗಿಡ ನೆಟ್ಟು ಗಮನ ಸೆಳೆದರು.
ಕಾಂಗ್ರೆಸ್ ಪಕ್ಷವು ಒಂದು ಕಲ್ಪವೃಕ್ಷ ಇದ್ದಂತೆ. ಅನೇಕ ಜಾತಿ, ಧರ್ಮ ಮತ್ತು ಭಾಷೆಯ ಜನರಿಗೆ ಆಶ್ರಯ ನೀಡುವುದರ ಜೊತೆಗೆ ಪಕ್ಷ ಮತ್ತು ಮನುಷ್ಯ -ಮನುಷ್ಯರ ಮಧ್ಯೆ ಪ್ರೀತಿ ಬೆಸೆಯುವುದೇ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಲಾದ ‘ನಮ್ಮ ನಡೆ ಬೂತ್ ಕಡೆ’ ಕಾರ್ಯಕ್ರಮಕ್ಕೆ ಚೆನ್ನೈತ್ತೋಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಇದೇ ವೇಳೆ ಬೂತ್ ಅಧ್ಯಕ್ಷರಾದ ಶಿವರಾಮ ಪೂಜಾರಿ, ಜಯಚಂದ್ರ ಬೊಳ್ಮಾರ್, ಮಾಧವ ಪೂಜಾರಿ, ಯೋಗೀಶ್ ಪ್ರಭು, ಆನಂದ ಪೂಜಾರಿ, ಆನಂದ ಆಚಾರ್ಯ, ಅಣ್ಣಿ ಪೂಜಾರಿ, ಕಿಶೋರ್ ಪೂಜಾರಿ ಇವರ ಮನೆಯಲ್ಲಿ ತೆಂಗಿನ ಗಿಡ ನೆಡಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಪಕ್ಷ ಸಂಘಟನೆ ಬಗ್ಗೆ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಿ.ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ ಭಾರತಿ ರಾಜೇಂದ್ರ ಪೂಜಾರಿ, ಕಾಂಗ್ರೆಸ್ ವಲಯಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಪ್ರಮುಖರಾದ ಅಬ್ಬಾಸ್ ಆಲಿ, ಕೆ.ಮಾಯಿಲಪ್ಪ ಸಾಲ್ಯಾನ್, ಯುವರಾಜ್ ಆಳ್ವ, ಶ್ರೀಧರ್ ಪೈ, ಯತೀಶ್ ಶೆಟ್ಟಿ, ಆನಂದ ಆಚಾರ್ಯ, ಚಂದ್ರಶೇಖರ್ ಪೂಜಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಪೂಜಾರಿ ಜೋರಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲವೀನಾ ವಿಲ್ಮಾ ಮೊರಾಸ್, ಜಗದೀಶ್ ಕೊಯಿಲ, ಸದಾನಂದ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ, ವನಿತಾ, ನಾಗೇಶ್, ಜಯಂತಿ, ನಿತೇಶ್, ರೇಖಾ, ಗೀತಾ ನಾರಾಯಣ್, ಭಾರತಿ ರಮೇಶ್ ಗಟ್ಟಿ, ರಮಾನಂದ ಸಪಲ್ಯ ಬೆದ್ರಕಾಡು, ಬಿ.ಆರ್ ಅಂಚನ್, ಅನಂತ ಪೈ, ಲಾದ್ರು ಮಿನೇಜಸ್, ಅಮ್ಮು ರೈಹರ್ಕಾಡಿ ಮತ್ತಿತರರು ಇದ್ದರು.
