ಮಂಗಳೂರು: ಕುನಿಲ್ ಶಾಲಾ ಸಮೂಹಗಳ ಮುಖ್ಯಾಧಿಕಾರಿಯಾದ ರೊ. ವಿಕ್ರಮ್ ದತ್ತಾರವರು ವಿದ್ಯಾರ್ಥಿಗಳು ನಿಶ್ಚಿತ ಗುರಿಯಿಟ್ಟು ಕೊಂಡು, ಯೋಜಿತ ವಾಗಿ ಅಧ್ಯಯನ ಮಾಡಿದಲ್ಲಿ ತಮ್ಮ ಕನಸನ್ನು ಸಾಕಾರ ಮಾಡಿಕೊಳ್ಳಲು ಸಾಧ್ಯ ಎಂದರು.ಇವರು ರೋಟರಿ ಬಾಲ ಭವನದಲ್ಲಿ ಜರಗಿದ ರೋಟರಿ ಕ್ಲಬ್ ಮಂಗಳೂರು ಉತ್ತರ ಇದರ ವತಿಯಿಂದ ಪರಿಸರದ 13 ಶಾಲೆಗಳ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಾ ದೇಶಕ್ಕೆ ಕೊರತೆ ಇರುವುದು ವೈದ್ಯರು, ಇಂಜಿನಿಯರ್ ಗಳದ್ದಲ್ಲ. ಉತ್ತಮ ಶಿಕ್ಷಕರ ಅವಶ್ಯಕತೆ ಇದೆ. ಶಿಕ್ಷಕರಾಗುವ ಮೂಲಕ ಉತ್ತಮ ವೈದ್ಯ, ಇಂಜಿನಿಯರ್, ವಿಜ್ಞಾನಿಗಳನ್ನು ರೂಪಿಸ ಬಹುದಾಗಿರುವುದರಿಂದ ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿಯೂ ಆಲೋಚಿಸಬೇಕೆಂದರು.WhatsApp Image 2021-09-23 at 4.53.59 PMಈ ಸಂದರ್ಭದಲ್ಲಿ ಜುಲೈ ತಿಂಗಳಿನಲ್ಲಿ ಜರಗಿದ ಚಾರ್ಟ್ ರಡ್ ಅಕೌಂಟ್ ಪರೀಕ್ಷೆ ಯಲ್ಲಿ ಇಡೀ ಭಾರತ ದೇಶಕ್ಕೇ ಪ್ರಥಮ ಸ್ಥಾನ ಪಡೆದ ನಮ್ಮ ಊರಿನ  ಹೆಮ್ಮೆ ಯ ರುಥ್ ಕ್ಲೇರ್ ಡಿ ‘ ಸಿಲ್ವ್ ಅವರನ್ನೂ ಸನ್ಮಾನಿಸಲಾಯಿತು. ನಿರಂತರ ಪರಿಶ್ರಮ, ಶ್ರದ್ದೆ ಮತ್ತು ನಿಷ್ಠೆಯಿಂದ ಅಭ್ಯಾಸ ನಡೆಸಿದರೆ ಎಂಥಾ ಕಠಿಣ ಪರೀಕ್ಷೆ ಯನ್ನಾದರೂ ಎದುರಿಸಿ ಜಯ ಸಾಧಿಸ ಬಹುದೆಂದರು.WhatsApp Image 2021-09-23 at 4.53.58 PM

ಪ್ರಾರಂಭದಲ್ಲಿ ಆನ್ ಶುಭ ಕಿಣಿಯವರು ಪ್ರಾರ್ಥನೆ ನೆರವೇರಿಸಿದರು.ರೊಟರಿ ಮಂಗಳೂರು ಉತ್ತರ ಕ್ಲಬ್ಬಿನ ಅಧ್ಯಕ್ಷ ರೊ. ದೇವದಾಸ್ ಅವರು ಸ್ವಾಗತಿಸಿ ಪ್ರಸ್ತಾವ ಭಾಷಣ ಮಾಡಿದರು.ಡಾ. ಪ್ರಕಾಶ್ ಕೆ. ಈ. ಮುಖ್ಯ ಅತಿಥಿಗಳ ಪರಿಚಯ ಮಾಡಿ ಕೊಟ್ಟರು. ಮಾಜಿ ಉಪ ರಾಜ್ಯಪಾಲ ಡಾ.ಶಿವಪ್ರಸಾದ್ ಸನ್ಮಾನ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ರೊ.ಗಣೇಶ್ ಕೃಷ್ಣ ಭಟ್ ವಂದನಾರ್ಪಣೆ ಸಲ್ಲಿಸಿದರು.

By suddi9

Leave a Reply

Your email address will not be published. Required fields are marked *