ಬಂಟ್ವಾಳ: ಸಜಿಪಮೂಡ ಗ್ರಾಮದ ಬಸ್ತಿಗುಡ್ಡೆ ನಿವಾಸಿ ನೌಫಲ್ ಯಾನೆ ಯೂಸುಫ್ ಎಂಬಾತನು ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ವೇಳೆ ಆಹಾರ ಮತ್ತು ನಾಗರಿಕ ಪೂರೈಕೆ ಶಾಖೆ ಶಿರಸ್ತೇದಾರ್ ನೇತೃತ್ವದ ಅಧಿಕಾರಿಗಳು ಗುರುವಾರ ಸಂಜೆ ದಾಳಿ ನಡೆಸಿದ್ದಾರೆ.
ಆರೋಪಿ ತನ್ನ ಗೂಡ್ಸ್ ವಾಹನದಲ್ಲಿ ತಲಾ ೫೦ ಕಿಲೂ ತೂಕದ ೪೦ ಗೋಣಿ ಚೀಲ ಅಕ್ಕಿ ಸಾಗಾಟ ಮಾಡುತ್ತಿದ್ದ ವೇಳೆ ವಶಪಡಿಸಿಕೊಂಡು ಆತನನ್ನು ನಗರ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
