ಬಂಟ್ವಾಳ: ತಾಲ್ಲೂಕಿನ ಕೊಯಿಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಿವೃತ್ತ ಶಿಕ್ಷಕಿ ಜೆ.ಕೆ.ಪಾವನಾದೇವಿ ಇವರನ್ನು ಮಂಗಳೂರು ಮೆಟ್ರೋ ಗೋಲ್ಡ್ ರೋಟರಿ ಕ್ಲಬ್ ವತಿಯಿಂದ ಭಾನುವಾರ ಸನ್ಮಾನಿಸಿದರು.
ಕ್ಲಬ್ ನ ಅಧ್ಯಕ್ಷ ಡಿ.ಪದ್ಮನಾಭ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರ ದಿನಾಚರಣೆ ಪ್ರಯುಕ್ತ ಸಮಾಜಮುಖಿ ಚಿಂತನೆಯಲ್ಲಿ ತೊಡಗಿರುವ ನಿವೃತ್ತ ಶಿಕ್ಷಕರನ್ನು ಗುರುತಿಸಿ ಅಭಿನಂದಿಸುವ ಮೂಲಕ ಸಮಾಜದಲ್ಲಿ ಗುರು ಹಿರಿಯರಿಗೆ ಗೌರವ ನೀಡುವ ಸಂದೇಶ ನೀಡುವ ಕಾಯಕದಲ್ಲಿ ಕ್ಲಬ್ ತೊಡಗಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯರಾದ ದಿನೇಶ ಶೆಟ್ಟಿ ಕೊಯಿಲ, ಲಕ್ಷ್ಮೀ ನಾರಾಯಣ ಗೌಡ ಆಚಾರಿಪಲ್ಕೆ, ಹಳೆ ವಿದ್ಯಾರ್ಥಿಗಳಾದ ಕೆ.ಎಚ್.ಅಹ್ಮದ್, ಸೀತಾರಾಮ ಗೌಡ ರಾಯಿ, ನಾಗರಾಜ ಭಟ್, ಅಬ್ದುಲ್ ಖಾದರ್, ರಾಮಚಂದ್ರ, ಜಿ.ಸೀತಾರಾಮ ಗೌಡ, ಪ್ರಶಾಂತ್ ಆರ್.ಗೌಡ ಇದ್ದರು. ಶಾಂತಾ ನಾಗರಾಜ್ ಸ್ವಾಗತಿಸಿ, ಜಯರಾಮ ಶೆಟ್ಟಿ ವಂದಿಸಿದರು.
