ಬಂಟ್ವಾಳ: ತಾಲ್ಲೂಕಿನ ವಿವಿಧೆಡೆ ಜಿಲ್ಲಾಡಳಿತದ ಕೋವಿಡ್ ಮಾರ್ಗಸೂಚಿಯಂತೆ ಸರಳ ರೀತಿಯಲ್ಲಿ ಶುಕ್ರವಾರ ಸಾರ್ವಜನಿಕ ಗಣೇಶೋತ್ಸವ ನಡೆಯಿತು. ಬಹುತೇಕ ಎಲ್ಲಾ ಕಡೆಗಳಲ್ಲಿ ಶುಕ್ರವಾರ ಬೆಳಿಗ್ಗೆ ಗಣೇಶನ ವಿಗ್ರಹ ಪ್ರತಿಷ್ಠೆಗೊಳಿಸಿ ಸಂಜೆ ವೇಳೆಗೆ ನೇತ್ರಾವತಿ ಮತ್ತು ಫಲ್ಗುಣಿ ನದಿ ಸಹಿತ ಕೆಲವೆಡೆ ತೆರೆದ ಬಾವಿ ಮತ್ತಿತರ ಕಡೆಗಳಲ್ಲಿ ವಿಸರ್ಜನೆಗೊಳಿಸಲಾಯಿತು.
ಈ ಬಾರಿ ಕಳೆದ ವರ್ಷದಂತೆ ಮೆರವಣಿಗೆ ಮತ್ತು ಟ್ಯಾಬ್ಲೋ ಇಲ್ಲದೆ ಸರಳ ಮತ್ತು ಅರ್ಥಪೂರ್ಣವಾಗಿ ಗಣೇಶನ ವಿಗ್ರಹಕ್ಕೆ ತ್ರಿಕಾಲ ಪೂಜೆ ಮತ್ತು ವಿಸರ್ಜನೆ ನಡೆದಿದೆ ಎಂದು ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.
ಬಂಟ್ವಾಳ ತಾಲ್ಲೂಕಿನ ವಿವಿಧೆಡೆ ಶುಕ್ರವಾರ ಪೂಜಿಸಲಾದ ಸಾರ್ವಜನಿಕ ಗಣೇಶನ ವಿಗ್ರಹಗಳು
ರಾಯಿ

ಬಿ.ಸಿ.ರೋಡು
ವಗ್ಗ ಕಾಡಬೆಟ್ಟು
ಸಿದ್ಧಕಟ್ಟೆ
ವಾಮದಪದವು
ಮುಲ್ಕಾಜೆಮೂಡ
ಇರ್ವತ್ತೂರು
ಫರಂಗಿಪೇಟೆ
ಸರಪಾಡಿ
