Published On: Mon, Aug 30th, 2021

ಮಾರ್ಗಸೂಚಿ ಕ್ರಮ’ಗಳನ್ನು ಪಾಲನೆ ಮಾಡುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮನವಿ..! ‘ದ್ವಿತೀಯ PUC ಕಾಲೇಜು’ ಆರಂಭ…!’

ಮಂಗಳೂರು: ಕೊರೋನಾ ಪಾಸಿಟಿವಿಟಿ ದರ ಕಡಿಮೆಗೊಂಡ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿಯನ್ನು ಸೆಪ್ಟೆಂಬರ್ ರಿಂದ ಆರಂಭಗೊಳಿಸಲಾಗುತ್ತಿದೆ. ಇಂತಹ ಕಾಲೇಜು ಆರಂಭಕ್ಕಾಗಿ ಮಾರ್ಗಸೂಚಿಯನ್ನು ಕೂಡ ಪ್ರಕಟಿಸಲಾಗಿದೆ. ಕೊರೋನಾ ಪಾಸಿಟಿವಿಟಿ ದರ ಹೆಚ್ಚಳದಿಂದಾಗಿ ಆಗಸ್ಟ್ 23ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭಗೊಳ್ಳಬೇಕಿದ್ದಂತ 9 ರಿಂದ ದ್ವಿತೀಯ ಪಿಯುಸಿ ತರಗತಿಗಳು ಆರಂಭಗೊಂಡಿರಲಿಲ್ಲ. WhatsApp Image 2021-08-30 at 2.06.51 PMದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಮಾರ್ಗಸೂಚಿ ಹೊರಡಿಸಿದರು. ತರಗತಿಗಳು ನಡೆಯುತ್ತಿರುವಾಗ ಕೊರೋನಾ ನಿಯಂತ್ರಣ ಮಾರ್ಗಸೂಚಿ ಕ್ರಮಗಳನ್ನು ಅನುಷ್ಠಾನಗೊಳಿಸೋ ಜವಾಬ್ದಾರಿ ಕಾಲೇಜಿನ ಪ್ರಾಂಶುಪಾಲರದ್ದು ಆಗಿದೆ. ಕೇರಳದಿಂದ ಬರೋ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಏಳ ಕ್ವಾರಂಟೈನ್ ಮಾಡಬೇಕು. ಹಾಗು ಕಾಲೇಜುಗಳಲ್ಲಿ ಪ್ರತ್ಯೇಕ ಕೋರೋನಾ ಆರೈಕೆ ಕೇಂದ್ರ ತೆರೆಯಬೇಕು ಎಂದು ತಿಳಿಸಿದ್ದಾರೆ.

  • ಪಿಯುಸಿ ತರಗತಿಗೆ ಹಾಜರಾಗುತ್ತಿರುವಂತ ವಿದ್ಯಾರ್ಥಿಗಳಿಗೆ ಕೊರೋನಾ ನೆಗೆಟಿವ್ ವರದಿ ಹಾಜರುಪಡಿಸೋದು ಕಡ್ಡಾಯವಾಗಿದೆ.
  • ಕ್ವಾರಂಟೈನ್ ನಲ್ಲಿ ಇರೋ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ವ್ಯವಸ್ಥೆ ಮಾಡುವಂತೆಯೂ ಸೂಚಿಸಲಾಗಿದೆ.
  • ಪದವಿ ಪೂರ್ವ ಕಾಲೇಜುಗಳ ಬೋಧಕ, ಬೋಧಕೇತರ ಸಿಬ್ಬಂದಿಗಳು ಕೊರೋನಾ ನೆಗೆಟಿವ್ ವರದಿ ಕಡ್ಡಾಯವಾಗಿದೆ.
  • ಕೇರಳದಿಂದ ಆಗಮಿಸುವ ವಿದ್ಯಾರ್ಥಿಗಳನ್ನು ಪ್ರತಿ ಏಳು ದಿನಗಳಿಗೊಮ್ಮೆ ಕೊರೋನಾ ನೆಗೆಟಿವ್ ಪರೀಕ್ಷಾ ವರದಿಯನ್ನು ಹಾಜರುಪಡಿಸೋ ಮೂಲಕ ತರಗತಿಗೆ ಹಾಜರಾಗಲು ತಿಳಿಸಲಾಗಿದೆ.
  • ಕೇರಳದಿಂದ ಬರೋ ಬೋಧಕ, ಬೋಧಕೇತರ ಸಿಬ್ಬಂದಿಗಳು ಎರಡು ಡೋಸ್ ಲಸಿಕೆ ಪಡೆದಿದ್ದರೂ ಒಂದೇ ನಿಯಮ ಪಾಲಿಸಬೇಕು.
  •  ಕೊರೋನಾ ನಿಯಂತ್ರಣಕ್ಕಾಗಿ ಕಾಲೇಜು ಪ್ರಾಂಶುಪಾಲರು ಡಿಡಿಪಿಯು ತಾಲೂಕು ಆರೋಗ್ಯಾಧಿಕಾರಿಗಳನ್ನು ಒಳಗೊಂಡ ಆಯಾ ಕಾಲೇಜುಗಳ ತಂಡ ರಚಿಸಿಕೊಳ್ಳುವಂತೆ ಸೂಚಿಸಲಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter