ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿರೋಡ್ ವಲಯ ದ ಕುರಿಯಾಳ ಒಕ್ಕೂಟ ದ ವತಿಯಿಂದ ಇಂದು ಶ್ರೀ ಉಮಾಮಹೇಶ್ವರ ದೇವಸ್ಥಾನ ಕುರಿಯಾಳ ಮಾಯಿಲ್ ಕೊಡಿ ಇಲ್ಲಿ ಸ್ವಚ್ಛತಾ ಕಾರ್ಯಕ್ರಮ ಮಾಡಲಾಯಿತು. ಈ ಕಾರ್ಯಕ್ರಮ ದಲ್ಲಿ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ದಯಾನಂದ ಶೆಟ್ಟಿ ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿರೋಡ್ ವಲಯದ ಮೇಲ್ವಿಚಾರಕಿ ವೇದಾವತಿ, ಕೂರಿಯಾಳ ಒಕ್ಕೂಟ ಹಾಗೂ ಬಿಸಿರೋಡ್ ವಲಯದ ಅಧ್ಯಕ್ಷ ಶೇಖರ ಸಾಮಾನಿ, ಒಕ್ಕೂಟದ ಸೇವಾ ಪ್ರತಿನಿಧಿ ಅಮಿತಾ ಹಾಗೂ ಒಕ್ಕೂಟದ ಸದಸ್ಯರು ಭಾಗವಹಿಸಿದರು
