ಬೆಂಗಳೂರು: ಈ ಬಾರಿ ಬೊಮ್ಮಾಯಿ ಅವರ ಸಂಪುಟವನ್ನು ಯಾರೆಲ್ಲಾ ಸೇರ್ತಾರೆ ಅನ್ನೋ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಅದರಂತೆ ಇಂದು ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯ ರಾಜಕೀಯ ರಂಗೇರಿದೆ. ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸಚಿವ ಸಂಪುಟ ರಚನೆಗೆ ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಒಬ್ಬೊಬ್ಬ ಶಾಸಕರಿಗೆ ಸಿಎಂ ಅವರಿಂದ ಕರೆ ಬರುತ್ತಲೆ ಇದೆ. ಅದರಂತೆ ಕರಾವಳಿಯ ಇಬ್ಬರು ಶಾಸಕರಿಗೆ ಈಗಾಗಲೇ ಸಚಿವ ಸ್ಥಾನ ಕನ್ಸರ್ಮ್ ಆಗಿದೆ. ಕಾರ್ಕಳ ಶಾಸಕ ಸುನೀಲ್ ಕುಮಾರ್, ಸುಳ್ಯ ಶಾಸಕ ಎಸ್. ಅಂಗಾರ ಅವರಿಗೆ ಸಿಎಂ ರಿಂದ ಕರೆ ಬಂದಿದೆ. ಹಾಗಾಗಿ ಈ ಇಬ್ಬರು ಇಂದು ಪ್ರಮಾಣ ವಚನ ಸ್ವೀಕರಿಸುವುದು ಖಚಿತವಾಗಿದೆ. ಕರಾವಳಿಯ ಇಬ್ಬರು ಶಾಸಕರು ಸಚಿವರಾಗುತ್ತಿರೋದು ಕರಾವಳಿಯ ಮಂದಿಯಲ್ಲಿ ಸಂಭ್ರಮ ಹೆಚ್ಚಿಸಿದೆ.
