ಬೆಂಗಳೂರು: ಬಸವರಾಜ ಬೊಮ್ಮಾಯಿ ಅಪ್ಪನಿಗಿಂತ ಬುದ್ಧಿವಂತ ಆಗಬಹುದು. ದಡ್ಡರು ಸಹ ಆಗಬಹುದು. ಮಹಾತ್ಮ ಗಾಂಧಿಯವರನ್ನು ನಾವು ಮಹಾತ್ಮ ಎಂದು ಕರೆಯುತ್ತೇವೆ. ಅವರ ಮಗ ಕೆಟ್ಟ ಅಭ್ಯಾಸಗಳನ್ನು ಕಲಿತಿದ್ದರು. ಬುದ್ದಿವಂತರ ಮಕ್ಕಳು ಜಾಣರು ಆಗಬಹುದು. ದಡ್ಡರು ಆಗಬಹುದು ಎಂದು ಹೇಳಿದ್ದೇನೆ ಅಷ್ಟೇ ಎಂದು  ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ  ತನ್ನ ಹೇಳಿಕೆಗೆ  ಸ್ಪಷ್ಟನೆ ನೀಡಿದರು.

download

ಸಿಎಂ ಬೊಮ್ಮಾಯಿಗೆ ತಂದೆಯ ಗುಣ ಮಗನಿಗೆ ಬರಾದು ಎಂದು ನಿನ್ನೆ ಮೈಸೂರಿನಲ್ಲಿ ನೀಡಿದ್ದ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಆ ರೀತಿ ಹೇಳಿಲ್ಲ. ತಂದೆಯ ಗುಣ ಮಕ್ಕಳಿಗೆ ಬರಬೇಕೆಂದಿಲ್ಲ. ಅಪ್ಪನಿಗಿಂತ ದಡ್ಡರೂ ಆಗಬಹುದು, ಬುದ್ಧಿವಂತರೂ ಆಗಬಹುದು. ಬರುತ್ತದೆ ಅಂತಾನೂ ಹೇಳಿಲ್ಲ. ಬರುವುದಿಲ್ಲ ಅಂತಾನೂ ಹೇಳಿಲ್ಲ. ಗಾಂಧೀಜಿ ಪುತ್ರ ಹರಿದಾಸ್ ಇರಲಿಲ್ವಾ, ಅವರು ಕೆಲ ಕೆಟ್ಟ ಗುಣ ಕಲಿತಿದ್ದರು. ಆದರೆ ಗಾಂಧೀಜಿಗೆ ನಾವು ಮಹತ್ಮಾ ಎನ್ನುತ್ತೇವೆ ಎಂದು ನಿನ್ನೆಯ ಹೇಳಿಕೆಗೆ ಸ್ಪಷ್ಟನೆ ಕೊಟ್ಟರು.

By suddi9

Leave a Reply

Your email address will not be published. Required fields are marked *