ಮಂಗಳೂರು: ‘ಕಾಂಪೌಂಡ್’ ಕಿರುಚಿತ್ರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ಮಜಾಟಾಕೀಸ್ ಗುಂಡುಮಾಮ ಖ್ಯಾತಿಯ ನವೀನ್ ಡಿ ಪಡೀಲ್ ಅವರು ಚಿತ್ರ ತಂಡಕ್ಕೆ ಶುಭಾಶಯ ಸಲ್ಲಿಸಿದ್ದಾರೆ.4 (1)ಆರ್ ಕೆ ಮಂಗಳೂರು ನಿರ್ದೇಶನದ ಚೊಚ್ಚಲ ಕಿರುಚಿತ್ರ ಕಂಪೌಂಡ್ ಇದಾಗಿದೆ. ಇದು ಶ್ರೀ ದುರ್ಗಾ ಸಾನಿಧ್ಯ ಬ್ಯಾನರ್ ಅಡಿಯಲ್ಲಿ ಮೂಡಿಬಂದ ಮಕ್ಕಳ ಚಿತ್ರವಾಗಿದ್ದು, ನಿರ್ಮಾಪಕ ವೀರೇಂದ್ರ ಸುವರ್ಣ ಕಟೀಲ್ ಹಾಗೂ ಪ್ರೊಡಕ್ಷನ್ ಕಂಟ್ರೋಲರ್ ಶರ್ಮಿಳಾ ಸುವರ್ಣ ನಿರ್ಮಿಸಿದ ಚಿತ್ರವಾಗಿದೆ.

WhatsApp Image 2021-07-17 at 3.17.16 PMಈ ಕಂಪೌಂಡ್ ಕಿರುಚಿತ್ರವು ಜು.18 ರಂದು ಭಾನುವಾರ ಬೆಳಿಗ್ಗೆ 11:00 ಗಂಟೆಗೆ ಆರ್ ಕೆ ಮಂಗಳೂರು ಸ್ಟುಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಆಗಲಿದೆ.

WhatsApp Image 2021-07-17 at 3.17.57 PMಆರ್ ಕೆ ಮಂಗಳೂರು ಈ ಕಿರು ಚಿತ್ರವನ್ನು ನಿರ್ದೇಶನ ಮಾಡುವುದಲ್ಲದೆ ತನ್ನ ಕ್ಯಾಮೆರಾ ಕೈಚಳಕವನ್ನು ತೋರಿಸಿದ್ದಾರೆ ಹಾಗೂ ಸಂಕಲನವನ್ನು ಕೂಡ ಇವರೇ ನಿರ್ವಹಿಸಿದ್ದು ಮೂರು ಕ್ಷೇತ್ರದಲ್ಲೂ ಒಬ್ಬರೇ ಕೆಲಸ ಮಾಡಿ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ಕನ್ನಡ ಮತ್ತು ತುಳು ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಆರ್ ಕೆ ಮಂಗಳೂರು ಇದೀಗ ನಿರ್ದೇಶನವನ್ನು ಮಾಡಿದ್ದಾರೆ.WhatsApp Image 2021-07-17 at 3.17.56 PMಕನ್ನಡ ತುಳು ಭಾಷೆಯ ಹಲವು ಸಿನಿಮಾಗಳಲ್ಲಿ ನಟಿಸಿ ಪ್ರಖ್ಯಾತಿ ಪಡೆದ ಬಾಲನಟ ಧನ್ವಿತ್ ವಿ ಸುವರ್ಣ ಕಟೀಲ್ ನಟಿಸಿದ ಕಿರುಚಿತ್ರ ಕಂಪೌಂಡ್ ಇದಾಗಿದ್ದು ಹೊಸ ವಿಚಾರವನ್ನು ಕಿರುಚಿತ್ರ ಹೇಳುತ್ತಿದೆ. ಕೊರೊನಾ ಕಾಲದಲ್ಲಿ ಮಕ್ಕಳು ಅನುಭವಿಸಿದ ಸಂಕಷ್ಟವನ್ನು ಈ ಕಿರುಚಿತ್ರದಲ್ಲಿ ಬಿಚ್ಚಿಡಲಾಗಿದೆ ಇದೊಂದು ನೈಜ ಕಥಾಹಂದರವಾಗಿದೆ. ಧನ್ವಿತ್ ಸುವರ್ಣ ಗುಂಡಾಡಿ ಗುಂಡ ಎನ್ನುವ ಕಿರು ಮಕ್ಕಳ ಚಿತ್ರದಲ್ಲಿ ನಟಿಸಿದ್ದು, ಸೆನ್ಸಾರ್ ಆಗಿ ಅವಾರ್ಡ್ ಗಳತ್ತ ಹೆಜ್ಜೆ ಹಾಕುತ್ತಿದೆ. ಜೊತೆಗೆ, ಹಲವು ಕನ್ನಡ ಮತ್ತು ತುಳು ಸಿನಿಮಾಗಳಲ್ಲಿ ಬಾಲನಟನಾಗಿ ನಟಿಸಿದ ಸಿನಿಮಾಗಳು ಇದೀಗ ಬಿಡುಗಡೆಗೆ ಸಿದ್ಧವಾಗಿದೆ.

By suddi9

Leave a Reply

Your email address will not be published. Required fields are marked *