ಬಂಟ್ವಾಳ: ತಂದೆ ತಾಯಿಯವರ ಸವಿನೆನಪಿನ ಅಂಗವಾಗಿ ಮತ್ತು ಮಕ್ಕಳ ಹುಟ್ಟುಹಬ್ಬವನ್ನು ಇಲ್ಲೊಬ್ಬರು ಸಮಾಜಮುಖಿ ಚಿಂತನೆಯ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿ ಇತರರಿಗೆ ಮಾದರಿಯಾಗಿದ್ದಾರೆ. ಪಂಜಿಕಲ್ಲು ಗ್ರಾಮದ ದೇವಪ್ಪ ಕುಲಾಲ್ ನಮಿತಾ ಕುಲಾಲ್ ಅವರು ಈ ವಿಶಿಷ್ಟ ರೀತಿಯ ಕಾರ್ಯಕ್ರಮದ ಮೂಲಕ ಜನಮೆಚ್ಚುಗೆ ಗಳಿಸಿದ್ದಾರೆ. ದೇವಪ್ಪ ಕುಲಾಲ್ ಪಂಜಿಕಲ್ಲು ಇವರ ತಂದೆತಾಯಿಗಳಾದ ದಿ! ಶಿವಯ್ಯ ಮೂಲ್ಯ ಮೋನಮ್ಮ ದಂಪತಿಗಳ ಸವಿನೆನಪಿಗಾಗಿ ಮತ್ತು ಇಬ್ಬರು ಮಕ್ಕಳಾದ ಚಿರಾಗ್ ರಾಜ್ ,ಜೋಶಿತಾ, ಅವರ ಹುಟ್ಟು ಹಬ್ಬವನ್ನು ಗೌಜಿಗದ್ದಲವಿಲ್ಲದೆ ಸರಳವಾಗಿ ಪಂಜಿಕಲ್ಲು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಮೂರು ಗ್ರಾಮದ ವಿಕಲಚೇತನರಿಗೆ, ಕೊರೊನಾ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತೆ ಯರಿಗೆ , ವಿಧವೆಯರಿಗೆ ಹಾಗೂ ಬಡ ಕುಟುಂಬಕ್ಕೆ ಆಹಾರದ ಕಿಟ್ ನ್ನು ಪಂಜಿಕಲ್ಲು ಕ್ಷೀರ ಧಾರೆ ಹಾಲು ಉತ್ಪಾದಕ ಸಹಕಾರಿ ಸಂಘದ ಸಭಾಂಗಣದಲ್ಲಿ ವಿತರಣೆ ಮಾಡುವ ಮೂಲಕ ಆಚರಿಸಿದರು.
ಪಂಜಿಕಲ್ಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಜಿಕಲ್ಲು ಮೂಡುನಡುಗೋಡು ಮತ್ತು ಬುಡೋಳಿ ಗ್ರಾಮದ 35 ಮಂದಿಗೆ ಆಹಾರದ ಕಿಟ್ ವಿತರಿಸಿದರು. ಕಿಟ್ ವಿತರಿಸಿ ಮಾತನಾಡಿದ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುದರ್ಶನ ಜೈನ್, ಅವರು ದೇವಪ್ಪ ಕುಲಾಲ್ ಅವರ ಸ್ವಾರ್ಥರಹಿತ ಸಮಾಜ ಮುಖಿ ಕಾರ್ಯ ಇತರರಿಗೆ ಮಾದರಿಯಾಗಲಿ,
ಪ್ರಸ್ತುತ ದಿನಗಳಲ್ಲಿ ಆಶ್ರಮಗಳು ಹೆಚ್ಚಾಗುತ್ತಿದ್ದು, ಗೌರವ ನೀಡುವ ಪದ್ದತಿಗಳು ದೂರವಾಗುತ್ತಿದೆ.ಇಂತಹ ಪರಿಸ್ಥಿತಿಯಲ್ಲಿ ತಂದೆತಾಯಿಗಳ ಕಾಲದ ನಂತರ ಸಮಾಜಮುಖಿಯಾಗಿ ನೆನಪು ಮಾಡಿರುವುದು ಅಭಿನಂಧನೀಯ ಕಾರ್ಯ. ನಿವೃತ್ತ ಮುಖ್ಯ ಶಿಕ್ಷಕ ಸೋಮಪ್ಪ ಮಡಿವಾಳ, ಮಾತನಾಡಿ ಅನೇಕ ವರ್ಷಗಳಲ್ಲಿ ಸಂಪತ್ತಿನ ಒಂದು ಅಂಶವನ್ನು ಸಮಾಜಕ್ಕೆ ಅರ್ಪಿಸುವ ಕಾರ್ಯ ಇತರರಿಗೆ ಪ್ರೇರಣೆಯಾಗಬೇಕು ಎಂದು ಅವರು ಹೇಳಿದರು. ಇಂತಹ ವ್ಯಕ್ತಿಗಳ ಸಂಖ್ಯೆ ಇನ್ನಷ್ಟು ವೃದ್ದಿಯಾಗಲಿ ಎಂದು ಅವರು ಹೇಳಿದರು.
ಮಹಾಲಿಂಗೇಶ್ವರ ದೇವಸ್ಥಾನ ಪೆದಮಲೆ ಇದರ ಆಡಳಿತ ಟ್ರಸ್ಟಿ ಜಗದೀಶ್ ಭಂಡಾರಿ, ಮಾತನಾಡಿ ಕೊರೊನಾ ಸಂಕಷ್ಟದ ಕಾಲದಲ್ಲಿ ದೇವಪ್ಪ ಕುಲಾಲ್ ಅವರ ಸಾಮಾಜಿಕ ಕಳಕಳಿಯ ಪರೋಪಕಾರದ ಕಾರ್ಯ ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ನಿವೃತ್ತ ಮೆಸ್ಕಾಂ ಅಧಿಕಾರಿ ರಮಾನಾಥ ಬಂಗೇರ, ಕೃಷಿಕ ಉದ್ಯಮಿ ಗಂಗಾಧರ, ಸುರೇಶ್ ಜೋರ, ಕಾರ್ಯಕ್ರಮ ಸಂಘಟಕರ ಸಹೋದರ ರಾದ ರಘುರಾಮ ಕುಲಾಲ್, ಶೀನ ಕುಲಾಲ್, ಮೋನಪ್ಪ ಕುಲಾಲ್ ಹಾಗೂ ಹುಟ್ಟು ಹಬ್ಬವನ್ನು ಆಚರಿಸಿದ ದೇವಪ್ಪಮತ್ತು ನಮಿತಾ ಕುಲಾಲ್ ಅವರ ಮಕ್ಕಳಾದ ಚಿರಾಗ್ ರಾಜ್ ,ಜೋಶಿತಾ, ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಘಟಕ ಸಮಾಜ ಸೇವಕ ದೇವಪ್ಪ ಕುಲಾಲ್ ಕಾರ್ಯಕ್ರಮ ದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು. ನಮಿತಾದೇವಪ್ಪ ಕುಲಾಲ್ ಸ್ವಾಗತಿಸಿ ವಂದಿಸಿದರು.
