ಬಂಟ್ವಾಳ: ತಾಲ್ಲೂಕಿನ ಕಕ್ಯಪದವು ಎಲ್. ಸಿ.ಆರ್ ಇಂಡಿಯನ್ ಪದವಿ ಕಾಲೇಜಿನಲ್ಲಿ ದೈವಸ್ಥಾನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಸೋಮವಾರ ನಡೆದ ಕೋವಿಡ್ ತಡೆ ಲಸಿಕೆ ಅಭಿಯಾನದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.
ಬಂಟ್ವಾಳ ಇಲ್ಲಿನ ಕಕ್ಯಪದವು ಎಲ್.ಸಿ.ಆರ್. ಇಂಡಿಯನ್ ಪದವಿ ಕಾಲೇಜಿನಲ್ಲಿ ದೈವಸ್ಥಾನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ವಿದ್ಯಾರ್ಥಿಗಳಿಗೆ ಕೋವಿಡ್ ತಡೆ ಲಸಿಕೆ ಅಭಿಯಾನ ಸೋಮವಾರ ನಡೆಯಿತು. ಪ್ರಾಂಶುಪಾಲ ಶಿವರಾಜ್ ಗಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಮೈರಾ, ಉಪಾಧ್ಯಕ್ಷ ಚಿದಾನಂದ ರೈ ಕಕ್ಯ ಮತ್ತಿತರರು ಇದ್ದರು.
