ಬಂಟ್ವಾಳ:ಇಲ್ಲಿನ ಬಡಗಕಜೆಕಾರು ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಆಶಾ ಕಾರ್ಯಕರ್ತೆಯರ ಸಭೆ ನಡೆಸಿ ಕೋವಿಡ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಶ್ರಮಿಸಬೇಕು ಎಂದರು.
ಸ್ಥಳೀಯ ಸೋಂಕಿತರ ಬಗ್ಗೆ ಮಾಹಿತಿ ಪಡೆದು ಅವರ ಕುಟುಂಬಕ್ಕೆ ದಿನಬಳಕೆ ಸಾಮಗ್ರಿ ವಿತರಿಸಬೇಕು ಎಂದು ಸಲಹೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬೇಬಿ ಕುಂದರ್, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪದ್ಮಶೇಖರ್ ಜೈನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಸ್ಮ ಅಜೀಜ್, ಉಪಾಧ್ಯಕ್ಷ ಡೀಕಯ್ಯ ಬಂಗೇರ, ಸದಸ್ಯರಾದ ಜಾನ್ ಡಿಸೋಜ, ಹರಿಣಾಕ್ಷಿ ಪೂಜಾರಿ, ಪ್ರಮುಖರಾದ ಮೋಹನ್ ಗೌಡ ಕಲ್ಮಂಜ, ಜಯ ಬಂಗೇರ, ಸುಧಾಕರ್ ಶೆಣೈ, ವಾಸು ಪೂಜಾರಿ, ವಿಶ್ವನಾಥ್ ಪೂಜಾರಿ, ಬಾಲಕೃಷ್ಣ ಪ್ರಭು, ಯಾಕುಬ್ ಉದ್ದಗುಡ್ಡೆ ಇದ್ದರು.
