ಮಂಗಳೂರು: ಶೃಂಗೇರಿಯ ಉಳುವಲ್ಲಿ ಗ್ರಾಮದ ಶ್ರೀನಿವಾಸ ಶೆಟ್ಟಿ ಎಂಬವರ ಮಗಳು ಕುಮಾರಿ ನಿಕಿತಾ ಶೆಟ್ಟಿ ನರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ರೂ .5 ಲಕ್ಷ ವೆಚ್ಚ ತಗಲುವುದೆಂದುವೈದ್ಯರು ತಿಳಿಸಿದ್ದಾರೆ.
ಕೂಲಿ ಕಾರ್ಮಿಕ ರಾದ ಶ್ರೀ ಶ್ರೀನಿವಾಸ ಶೆಟ್ಟಿಆರ್ಥಿಕ ಮುಗ್ಗಟ್ಟಿನಲ್ಲಿ ಇದ್ದು ಮಗಳ ಚಿಕಿತ್ಸೆಗೆ ಕಷ್ಟಪಡುತ್ತಿರುವ ಮಾಹಿತಿಯು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಯವರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ನಿಕಿತಾ ಶೆಟ್ಟಿಯ ಚಿಕಿತ್ಸೆಗೆ ತಕ್ಷಣ ಸ್ಪಂದಿಸಿ ಅನುದಾನವನ್ನು ಒದಗಿಸಿದರು.ಚಿಕಿತ್ಸೆ ಪಡೆಯುತ್ತಿರುವ ನಿಖಿತಾ ಶೀಘ್ರ ಗುಣಮುಖವಾಗಲಿ ಎಂದು ದೇವರಲ್ಲಿ ಪ್ರಾರ್ಥನೆ

