ಮಂಗಳೂರು: ಬೋಂದೆಲ್ ಪದವಿನಂಗಡಿಯಲ್ಲಿ ಅಡ್ಡಬಂದ ಸ್ಕೂಟರ್ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಬೈಕ್ ಪಲ್ಟಿಯಾಗಿ ಸವಾರ ಗಂಭೀರ ಗಾಯಗೊಂಡ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೋಂದೆಲ್ ಕಡೆಯಿಂದ ಕೆಟಿಎಂ ಬೈಕಿನಲ್ಲಿ ಬರುತ್ತಿದ್ದ ಸವಾರ ಪ್ರಶಾಂತ್ ಎದುರಿನಿಂದ ಬಂದ ಸ್ಕೂಟರ್ ತಪ್ಪಿಸಲು ಹೋಗಿ ಎರಡು ಪಲ್ಟಿಯಾಗಿ ಎದುರಿನಲ್ಲಿದ್ದ ಕೋಲ್ಡ್ ಡ್ರಿಂಕ್ಸ್ ಬಾಟಲಿಯ ಬಾಕ್ಸ್ ಗೆ ಡಿಕ್ಕಿಯಾಗಿದೆ.
ಬೈಕ್ ಸವಾರ ಪ್ರಶಾಂತ್ ನೀರುಮಾರ್ಗದ ಚೇತನಾ ಎಂಟರ್ ಪ್ರೈಸಸ್ ಅಂಗಡಿಯಲ್ಲಿ ಕೆಲಸಕ್ಕಿದ್ದು ಗಂಭೀರ ಗಾಯಗೊಂಡ ಆತನನ್ನು ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತ್ಯು.
