ಬಂಟ್ವಾಳ:ಇಲ್ಲಿನ ಕೊಯಿಲ ಗ್ರಾಮದ ಬಬ್ಬರಬೈಲು ದೈವಸ್ಥಾನದಲ್ಲಿ ಇದೇ ೧೦ರಂದು ರಾತ್ರಿ ಬೊಬ್ಬರ್ಯ ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ ನಡೆಯಲಿದೆ. ರಾತ್ರಿ ೭ ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ, ೮ಗಂಟೆಗೆ ಬೊಬ್ಬರ್ಯ ದೈವದ ನೇಮೋತ್ಸವ ಮತ್ತು ರಾತ್ರಿ ೧ ಗಂಟೆಗೆ ದೈವವು ಗಂಗಾ ಭೇಟಿಗೆ ಹೊರಡುವುದು, ೨ಗಂಟೆಗೆ ಅಣ್ಣಪ್ಪ ಪಂಜುರ್ಲಿ ಮತ್ತು ಗುಳಿಗ ದೈವದ ಕೋಲ ನಡೆಯಲಿದೆ.

ಇದೇ ೧೧ರಂದು ರಾತ್ರಿ ಗಂಟೆ ೮ಕ್ಕೆ ಕೊರಗಜ್ಜ ದೈವಸ್ಥಾನದಲ್ಲಿ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ ಎಂದು ಕ್ಷೇತ್ರದ ಟ್ರಸ್ಟಿ ವಸಂತ ಕುಮಾರ್ ಅಣ್ಣಳಿಕೆ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *