ಬಂಟ್ವಾಳ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರ ಪ್ರತಿಭಟನೆ ಎರಡನೇ ದಿನ ಮುಂದುವರಿದಿದ್ದು, ಎಂದಿನಂತೆ ಖಾಸಗಿ ಬಸ್ ಓಡಾಟ ಕಂಡು ಬಂದಿದೆ. ಬೆಳಿಗ್ಗೆ ಮತ್ತು ಸಂಜೆ ವೇಳೆ ಕೆಲಸಕ್ಕೆ ತೆರಳುವ ಹಲವು ಮಂದಿ ಬಿ.ಸಿ.ರೋಡಿನಲ್ಲಿ ಕೆಲ ಹೊತ್ತು ಸಮಯಕ್ಕೆ ಸರಿಯಾಗಿ ಬಸ್ ಸಿಗದೆ ತೊಂದರೆಗೀಡಾದರು. ಬಸ್ ಸಿಗದೆ ಮರ‍್ನಾಲು ಮಂದಿ ಆಟೋ ರಿಕ್ಷಾ ಗೊತ್ತುಪಡಿಸಿ ಪ್ರಯಾಣಿಸದ ಪ್ರಸಂಗವೂ ನಡೆದಿದೆ.

