ಬಂಟ್ವಾಳ : ತಾಲೂಕು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ  ಒಕ್ಕೂಟ ಇದರ ವತಿಯಿಂದ ಪಾಣೆಮಂಗಳೂರು ರೈತರ ಸೇವಾ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಮೋಹನಪ್ರಭು ಇವರು ನಿವೃತ್ತಿ ಹೊಂದಿದ್ದು ಇವರಿಗೆ ಗೌರಭಿನಂದನೆ ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿಯಾದ ತ್ರಿವೇಣಿರಾವ್ ಇವರಿಗೆ ಸನ್ಮಾನ ಸಮಾರಂಭ ಜರುಗಿತು. ಎಸ್ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ರಾಜಾರಾಮ ಭಟ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಸನ್ಮಾನಿತರನ್ನುಅಭಿನಂದಿಸಿ ಮಾತನಾಡಿದರು.

DSC_4875

ಮುಖ್ಯ ಅಥಿತಿಗಳಾಗಿ ಉಪನಿರ್ಬಂಧಕರಾದ ಪ್ರವೀಣ್.ಬಿ.ನಾಯಕ್, ಎಸ್ಸಿಡಿಸಿಸಿ ಬ್ಯಾಂಕಿನ ಎಜಿಎಂ ಅಶೋಕ್ ಕುಮಾರ್,ಶಾಖಾ ವ್ಯವಸ್ಥಾಪಕರಾದ ಶಿವಪ್ರಸಾದ್ ಹಾಗೂ ಬ್ಯಾಂಕಿನ ಮೇಲ್ವಿಚಾರಕರಾದ ಯೋಗಿಶ್ ಗೌಡ ಉಪಸ್ಥಿತರಿದ್ದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಒಕ್ಕೂಟದ ಅಧ್ಯಕ್ಷರಾದ ಸುಧಾಕರಶೆಟ್ಟಿ ಪ್ರಾಸ್ತಾವಿಕ ನುಡಿಗೈದರು. ಈಶ್ವರನಾಯ್ಕ್ ಸ್ವಾಗತಿಸಿದರು. ಅಲ್ರ‍್ಟ್ಡಿಸೋಜ ವಂದಿಸಿದರು. ತಾಲೂಕಿನ ಎಲ್ಲಾ ಪ್ಯಾಕ್ಸ್ನಸಿ.ಇ.ಓಗಳು ಸಭೆಯಲ್ಲಿ ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *