Published On: Mon, Apr 5th, 2021

ಪೊಳಲಿ ಜಾತ್ರೆಯನ್ನು ಸರಳ ರೀತಿಯಲ್ಲಿ ಆಚರಿಸಲು ತೀರ್ಮಾನಿಸಿದ ಆಡಳಿತ ಮಂಡಳಿ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾ. ೧೪ರಿಂದ ಎ. ೧೨ರ ವರೆಗೆ ಒಂದು ತಿಂಗಳ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಕೋವಿಡ್-೧೯ ಹಿನ್ನೆಲೆಯಲ್ಲಿ ಸರಕಾರ ಹಾಗೂ ದ.ಕ.ಜಿಲ್ಲಾಕಾರಿಗಳ ಆದೇಶದಂತೆ ಸರಳ ಹಾಗೂ ಸಾಂಕೇತಿಕ ಜಾತ್ರೆ ಆಚರಣೆಗೆ ಆಡಳಿತ ಮಂಡಳಿ ತೀರ್ಮಾನಿಸಿದೆ.

5vp polali

ಎ.೫ ರಂದು ಸೋಮವಾರ ಕ್ಷೇತ್ರದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅವರ ನೇತೃತ್ವದಲ್ಲಿ ಆಡಳಿತ ಮಂಡಳಿ ಹಾಗೂ ಅಕಾರಿಗಳ ಸಮಾಲೋಚನಾ ಸಭೆ ನಡೆಯಿತು.

ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಜಾತ್ರೆ ನಡೆಸುವ ನಿಟ್ಟಿನಲ್ಲಿ ಕೆಲವೊಂದು ಮಹತ್ತರ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಭಕ್ತಾಗಳು ಜಾತ್ರೆಯಲ್ಲಿ ಪಾಲ್ಗೊಳ್ಳುವ ವೇಳೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಜಾತ್ರೆ ವೇಳೆ ಹೂವು, ಹಣ್ಣುಕಾಯಿ ಹಾಗೂ ಕಲ್ಲಂಗಡಿ ಅಂಗಡಿ ಹೊರತುಪಡಿಸಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ, ಸಂತೆ/ ಅಂಗಡಿಗೆ ಅವಕಾಶವಿರುವುದಿಲ್ಲ.

ಆದರೆ ಗ್ರಾ.ಪಂ.ನಿAದ ಪರವಾನಿಗೆ ಪಡೆದ ಅಂಗಡಿಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಎ. ೬ರಿಂದ ೫ ದಿನಗಳ ಕಾಲ ಚೆಂಡು ಉತ್ಸವ ನಡೆಯಲಿದ್ದು, ಎ. ೧೧ರಂದು ಮಹಾರಥೋತ್ಸವ ನಡೆಯಲಿದೆ. ಅಂತಿಮವಾಗಿ ಯಾವುದೇ ಬದಲಾವಣೆಗಳು ಸರಕಾರದ ಮುಂದಿನ ಕೋವಿಡ್ ನಿಯಮಾವಳಿ ಆದೇಶಕ್ಕೆ ಒಳಪಟ್ಟಿರುತ್ತದೆ. ದೇವಸ್ಥಾನದಲ್ಲಿ ಸೇವೆಗಳಿಗೆ ಪ್ರಸಾದವನ್ನು ಮಾತ್ರ ನೀಡಲಾಗುತ್ತದೆ ಎಂಬ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ಸಭೆಯಲ್ಲಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್, ತಾ.ಪಂ.ಕಾರ್ಯನಿರ್ವಹಣಾಕಾರಿ ರಾಜಣ್ಣ, ತಾಲೂಕು ಆರೋಗ್ಯಾಕಾರಿ ಡಾ| ದೀಪಾ ಪ್ರಭು, ಬಂಟ್ವಾಳ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್  ಟಿ.ಡಿ.ನಾಗರಾಜ್, ಮೊಕ್ತೇಸರರಾದ ಯು.ತಾರಾನಾಥ ಆಳ್ವ, ಚೇರಾ ಸೂರ್ಯನಾರಾಯಣ ರಾವ್, ಪವಿತ್ರಪಾಣಿ-ಪ್ರಧಾನ ಅರ್ಚಕ ಪಿ.ಮಾಧವ ಭಟ್, ಕಾರ್ಯನಿರ್ವಹಣಾಕಾರಿ ಪಿ. ಜಯಮ್ಮ, ಕರಿಯಂಗಳ ಗ್ರಾ.ಪಂ.ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಪಿಡಿಒ ನಯನಾ, ಅರ್ಚಕರಾದ ನಾರಾಯಣ ಭಟ್, ರಾಮ ಭಟ್, ಪರಮೇಶ್ವರ ಭಟ್ ಮೊದಲಾದವರು ಉಪಸ್ಥಿತರಿದ್ದರು.

ತಾ 6-4-2021 ಮಂಗಳವಾರ ಕೊಡಿಚೆಂಡು
ತಾ 10-4-2021 ಶನಿವಾರ ಕಡೆಚೆಂಡು
ತಾ 11-4-2021 ಆದಿತ್ಯವಾರ ಮಹಾರಥೋತ್ಸವ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter