ಮಂಗಳೂರು: ಜೀವನ್‌ಧಾರ ಸಮಾಜ ಸೇವಾ ಕೇಂದ್ರ, ಕುಲಶೇಖರ, ಮಂಗಳೂರು ಇದರ ವತಿಯಿಂದ ಮಾ. 16 ರಂದು ಬೆಳಿಗ್ಗೆ ೧೦.೩೦ರಿಂದ ೧.೦೦ರವರೆಗೆ ಜೀವನ್‌ಧಾರ ಸಮಾಜ ಸೇವಾ ಕೇಂದ್ರದ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ನೆರವೇರಿಸಲಾಯಿತು.IMG-20210316-WA0021

ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಶ್ರೀಮತಿ ಮರಿಯಮ್ಮ ಥೋಮಸ್, ಕಾರ್ಯಕ್ರಮದ ಅಧ್ಯಕ್ಷರಾಗಿ ಜೀವನ್‌ಧಾರ ಸಮಾಜ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಭಗಿನಿ ಅನ್ನ ಮರಿಯ, ಜೀವನ್‌ಧಾರ ಸಮಾಜ ಸೇವಾ ಕೇಂದದ್ರ ನಿರ್ದೇಶಕಿ ಭಗಿನಿ ಐಡಾ ಜಾನೆಟ್, ಶಾಂತಿ ಸ್ವಸಹಾಯ ಸಂಘದ ಸದಸ್ಯೆ ಶ್ರೀಮತಿ ಆಲಿಸ್ ಲೋಬೊರವರು ವೇದಿಕೆಯ ಮೇಲೆ ಹಾಜರಿದ್ದರು. ಶ್ರೀಮತಿ ಮರಿಯಮ್ಮ ಥೋಮಸ್‌ರವರು ಮಹಿಳೆಯರನ್ನು ಹುರಿದುಂಬಿಸಿ ತಮ್ಮ ಸಾಮರ್ಥ್ಯಗಳನ್ನು ವೃದ್ದಿಸಲು ನಿರಂತರ ಪ್ರಯತ್ನ ಹಾಗೂ ಕನಸನ್ನು ನನಸಾಗಿಸುವ ಛಲವನ್ನು ಪಡೆದು ಸ್ವಾವಲಂಬನೆಯ ಜೀವನವನ್ನು ನಡೆಸಲು ಕರೆ ನೀಡಿದರು.IMG-20210316-WA0036

ಕಾರ್ಯಕ್ರಮದ ಅಧ್ಯಕ್ಷರಾದ ಭಗಿನಿ ಅನ್ನ ಮರಿಯರವರು ಮಹಿಳಾ ಸಶಕ್ತೀಕರಣದ ಚರಿತ್ರೆಯನ್ನು ವಿವರಿಸಿ ಸಾಮಾಜಿಕವಾಗಿ ಸಂಘಟಿತರಾಗಲು ಕರೆ ನೀಡಿದರು. ಶ್ರೀಮತಿ ಆಲಿಸ್ ಲೋಬೊರವರು ಸ್ವಸಹಾಯ ಸಂಘದ ನಿರ್ವಹಣೆ, ಶಿಸ್ತು ಹಾಗೂ ಹಣದ ವ್ಯವಹಾರದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.IMG-20210316-WA0043

ವೇದಿಕೆ ಕಾರ್ಯಕ್ರಮದ ನಂತರ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆಟೋಟ ಸ್ಪರ್ದೆಗಳನ್ನು ಏರ್ಪಡಿಸಿ ವಿಜೇತರಾದವರಿಗೆ ಬುಹುಮಾನ ವಿತರಿಸಲಾಯಿತು. ಭಗಿನಿ ವಿಲ್ಮಾ ಮ್ಯಾಥ್ಯುರವರು ವರದಿಯನ್ನು ವಾಚಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಹೊಲಿಗೆ ತರಬೇತಿ ಮಹಿಳೆಯರು ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು.IMG-20210316-WA0019

ಬಂದಂತಹ ಅತಿಥಿಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುಮಾರು ೮೫ ಮಂದಿ ಮಹಿಳೆಯರು ಪಾಲ್ಗೊಂಡರು.ಜೀವನ್‌ಧಾರಾ ಸಮಾಜ ಸೇವಾ ಕೇಂದ್ರದ ನಿರ್ದೇಶಕಿ ಹಾಗೂ ಸಂತ ಕ್ರೂಜ್ ಕಾನ್ವೆಂಟ್‌ನ ಮುಖ್ಯಸ್ಥೆಯಾಗಿರುವ ಭಗಿನಿ ಐಡಾ ಜಾನೆಟ್‌ರವರು ಸ್ವಾಗತಿಸಿದರು. ಶ್ರೀಮತಿ ಭಾರತಿ ವಂದಿಸಿದರು

 

By suddi9

Leave a Reply

Your email address will not be published. Required fields are marked *