ಮೂಡುಬಿದಿರೆ : ತಾಲೂಕಿನ ಅಗ್ನಿಶಾಮಕ ಠಾಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರವೀಣ್ ಮತ್ತು ಪ್ರಮುಖ ಅಗ್ನಿಶಾಮಕರಾಗಿ ಸೇವೆ ಸಲ್ಲಿಸುತ್ತಿರುವ ಯೋಗೀಶ್ ಪಿ.ಬಂಗೇರಾ ಅವರು ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿದ್ದಾರೆ.00012

ಪ್ರವೀಣ್ ಅವರು ಅಗ್ನಿಶಾಮಕ ದಳದಲ್ಲಿ ಕಳೆದ 38 ವರ್ಷಗಳಿಂದ ರಾಜ್ಯದ ಕಡೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ ಮೂಡುಬಿದಿರೆ ಅಗ್ನಿಶಾಮಕ ಠಾಣೆಯಲ್ಲಿ ಸಹಾಯಕ ಅಗ್ನಿಶಾಮಕ ಅಧಿಕಾರಿಯಾಗಿ ಮತ್ತು ಯೋಗೀಶ್ ಬಂಗೇರಾ ಅವರು ಕಳೆದ 28 ವರ್ಷಗಳಿಂದ ಅಗ್ನಿಶಾಮಕ ಠಾಣೆಯ ವಿವಿಧ ಕಡೆಗಳಲ್ಲಿ ವಿವಿಧ ಹುದ್ದೆ ಗಳನ್ನು ನಿರ್ವಹಿಸಿದ್ದು ಇದೀಗ ಮೂಡುಬಿದಿರೆಯ ಅಗ್ನಿಶಾಮಕದಲ್ಲಿ ಪ್ರಮುಖ ಅಗ್ನಿಶಾಮಕರಾಗರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರಿಬ್ಬರ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರವು ರಾಷ್ಟ್ರಪತಿ ಪದಕಕ್ಕೆ ಆಯ್ಕೆ ಮಾಡಿದ್ದು ಗಣರಾಜ್ಯೋತ್ಸವದ ದಿನವಾಗಿರುವ ಮಂಗಳವಾರ ಪದಕವನ್ನು ಸ್ವೀಕರಿಸಲಿದ್ದಾರೆ

By suddi9

Leave a Reply

Your email address will not be published. Required fields are marked *