ಬಂಟ್ವಾಳ :  ತಾಲೂಕಿನ ಅಮ್ಟಾಡಿಯ ಶ್ರೀ ಮಂಗ್ಲಿಮಾರ್ ಅಣ್ಣಪ್ಪಸ್ವಾಮಿ ಜುಮಾದಿ ಬಂಟ ದೈವಸ್ಥಾನದ ೨೦೨೦ರ ಎಪ್ರಿಲ್‌ನಲ್ಲಿ ನಡೆಯಬೇಕಾಗಿದ್ದ ವಾರ್ಷಿಕ ನೇಮೋತ್ಸವವು ಮಹಾಮಾರಿ ಕೋರೋನದಿಂದಾಗಿ ನಡೆದಿರುವುದಿಲ್ಲ.

ಪ್ರಶ್ನಾ ಚಿಂತನಾ ಪ್ರಕಾರ ಜನವರಿ ೨೧ನೇ ಗುರುವಾರ ಬೆಳಿಗ್ಗೆ ಕೋಳಿ ಕುಂಟ ಮತ್ತು ಜನವರಿ ೨೩ನೇ ಶನಿವಾರ ರಾತ್ರಿ ೭ ಗಂಟೆಗೆ ಒಳಗೊಂಡು ಬೆಳಗಿನ ಜಾವದವರೆಗೆ ಕಟ್ಟು ಕಟ್ಟಳೆಯೊಂದಿಗೆ  ದೈವಗಳಿಗೆ ಒಂದು ದಿನದ ನೇಮೋತ್ಸವವು ಜರಗಲಿರುವುದು ಎಂದು  ಶ್ರೀ ಕ್ಷೇತ್ರ ಆಡಳಿತ ಮೊಕ್ತೇಸರ ಎ. ರವಿಶಂಕರ ಶೆಟ್ಟಿ ಬಡಾಜೆಗುತ್ತು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.    ಹಾಗೆಯೇ ಮುಂದಿನ ಎಪ್ರಿಲ್ ನಲ್ಲಿ  ವರ್ಷಂಪ್ರತಿ ನಡೆಯುವ ಮೂರು ದಿವಸದ ಚೆಂಡು ಹಾಗೂ ನಾಲ್ಕು ದಿವಸದ ನೇಮೋತ್ಸವವು ಯಥಾ ಪ್ರಕಾರ ನಡೆಯಲಿರುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *