ಬಂಟ್ವಾಳ: ಅಧ್ಯಯನ ಶೀಲ, ಕ್ರಾಂತಿಕಾರಿ ಸನ್ಯಾಸಿ ಸ್ವಾಮಿ ವಿವೇಕಾನಂದರು ಕೆಲವೇ  ವರ್ಷ ಬದುಕಿದ್ದರೂ ಕೂಡಾ, ಬಹಳಷ್ಟು ಚಿಂತನೆಗಳನ್ನು ಈ ದೇಶದ ಜನರಿಗೆ ನೀಡಿದ್ದಾರೆ ಎಂದು ಬಿ.ಸಿ.ರೋಡಿನ  ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಹೇಳಿದ್ದಾರೆ.  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ಇದರ ಸಹಯೋಗದಲ್ಲಿ ಬಿ.ಸಿ.ರೋಡಿನ ಕಾಮಾಜೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಿವೇಕಾನಂದರ 158ನೇ ಜಯಂತಿಯ ಪ್ರಯುಕ್ತ  ಕಾಲೇಜು ಸಭಾಂಗಣದಲ್ಲಿ “ವಿವೇಕಾ ಸಂದೇಶ 2021”  ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸೊ ಮಾತನಾಡಿದ ಅವರು ಕಾರ್ಯಕ್ರಮಗಳು ಕೇವಲ ಒಂದು ದಿನಕ್ಕೆ ಸೀಮಿತವಾಗದೇ ವಿದ್ಯಾರ್ಥಿಗಳು ವಿವೇಕಾನಂದರ ಚಿಂತನೆಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು  IMG-20210116-WA0082

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪೊ. ಗಿರೀಶ್ ಭಟ್ ಮಾತಾಡಿ ಇಂತಹ ಕಾರ್ಯಕ್ರಮಗಳು ವಿವೇಕಾನಂದರನ್ನು ಮತ್ತಷ್ಟು ತಿಳಿಯಲು ಸಹಕಾರಿಯಾಗಿದೆ ಎಂದರು.ಎಬಿವಿಪಿ ಬಂಟ್ವಾಳ ನಗರ ಕಾರ್ಯದರ್ಶಿ ನಾಗರಾಜ್ ಶೆಣೈ ಉಪಸ್ಥಿತರಿದ್ದರು.ವಿದ್ಯಾರ್ಥಿ ಪರಿಷತ್ ನ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಯ ವಿಜೇತರಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪರಿಷತ್ ನ ಪ್ರಮುಖರು ಹಾಗೂ ಕಾಲೇಜಿನ ಅಧ್ಯಾಪಕರೂ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಪ್ರಾಧ್ಯಾಪಕರಾದ ಶಶಿಕಲಾ ಸ್ವಾಗತಿಸಿ, ವಿದ್ಯಾರ್ಥಿನಿ ಬಿಂದು ವಂದಿಸಿದರು. ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *