ಬಂಟ್ವಾಳ : ಶೈಕ್ಷಣಿಕ ರಂಗದಲ್ಲಿ ಮುಂದುವರೆದು ಪ್ರತಿ ಮನೆಯಲ್ಲೂ ಕೂಡ ಒಬ್ಬ ವಿದ್ಯಾಧನಿಕ ನಿರುವುದು ಕಾಲದ ಬೇಡಿಕೆಯಾಗಿದೆ ಎಂದು ದ.ಕ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹೇಳಿದರು.

ಅರ್ಶದೀಶ್ ರೈಟರ್ಸ್ ವತಿಯಿಂದ ಪಾಣೆಮಂಗಳೂರು ಸಮೀಪದ ನೆಹರುನಗರ ಮಸೀದಿ ವಠಾರದಲ್ಲಿ ಶೈಖುನಾ ಕೋಟ ಉಸ್ತಾದ್ ಹಾಗು ಶಹೀದೇ ಮಿಲ್ಲತ್ ಸಿಎಂ ಉಸ್ತಾದ್ ಇವರ ಜೀವನ ಚರಿತ್ರೆ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಸೆಮಿನಾರ್ ಹಾಗೂ ಅನುಸ್ಮರಣ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಯ್ಯಿದ್ ಅಕ್ರಮ್ ಅಲೀ ರಹ್ಮಾನಿ ತಂಙಳ್ ಮಾತನಾಡಿ ಶೈಖುನಾ ಕೋಟ ಉಸ್ತಾದ್ ಹಾಗು ಶಹೀದೇ ಮಿಲ್ಲತ್ ಸಿಎಂ ಉಸ್ತಾದ್ ಮಹಾ ಸಾಧಕರಾಗಿದ್ದು ಖಗೋಳ ಶಾಸ್ತ್ರಜ್ಞರು ಕೂಡ ಆಗಿದ್ದರು. ಅರ್ಶದೀಸ್ ಅಸೋಸಿಯೇಷನ್ ಕೇಂದ್ರ ಸಮಿತಿ ಅಧ್ಯಕ್ಷ ಕೆ.ಯು. ರಹ್ಮಾನ್ ಅರ್ಶದಿ ಕೋಲ್ಪೆ ಅದ್ಯಕ್ಷತೆ ವಹಿಸಿದ್ದರು.

ಹಸ್ಸನ್ ಅರ್ಶದಿ ಬೆಳ್ಳಾರೆ ಪ್ರಾಸ್ತಾವನೆಗೈದರು, ಸಲೀಂ ಅರ್ಶದಿ ದೆಮ್ಮಲೆ ಪುಸ್ತಕ ಪರಿಚಯ ಮಾಡಿದರು, ಅಡ್ವೋಕೇಟ್ ಹನೀಫ್ ಹುದವಿ ದೇಲಂಪಾಡಿ ಮುಖ್ಯ ಪ್ರಭಾಷಣಗೈದರು. ನೆಹರು ನಗರ ಜಮಾತ್ ಅಧ್ಯಕ್ಷ ಪಿ.ಎಸ್. ಅಬ್ದುಲ್ ಹಮೀದ್ ಮೊದಲ ಕೃತಿ ಸ್ವೀಕರಿಸಿದರು.
ಅಸ್ಸಯ್ಯದ್ ಬುರ್ಹಾನ್ ತಂಗಳ್ ಅಲ್ ಬುಖಾರಿ ಕಾಸರಗೋಡು, ಎಸ್.ಕೆ.ಎಸ್.ಎಸ್.ಎಫ್ ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಮೌಲಾನ ಅಬ್ದುರ್ರಝಾಕ್ ಹಾಜಿ ಮಲೇಶಿಯಾ ಕಬಕ, ದಾರುನ್ನೂರ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಅಬ್ದುಲ್ ರಜಾಕ್ ಹಾಜಿ , ಫಕೀರಬ್ಬ ಮಾಸ್ಟರ್ ದಾರುನ್ನೂರ್, ಅಬ್ದುಲ್ ಖಾದರ್ ಮಾಸ್ಟರ್ ಬಂಟ್ವಾಳ, ಪಿ.ಎಂ.ಹಕೀಂ ಪರ್ತಿಪ್ಪಾಡಿ, ಅಬ್ದುಲ್ ರಹಿಮಾನ್ ಫೈಝಿ, ಶಂಸುದ್ದೀನ್ ಹನೀಫಿ, ಸಲೀಂ ನಹರುನಗರ ಮೊದಲಾದವರು ಉಪಸ್ಥಿತರಿದ್ದರು

By Suddi9 Author

Suddi9

Leave a Reply

Your email address will not be published. Required fields are marked *