ಬಂಟ್ವಾಳ: ಆರ್ ಕೆ ಆರ್ಟ್ಸ್ ಚಿಣ್ಣರ ಮನೆ ವಿಟ್ಲ ಇದರ ವತಿಯಿಂದ ಯಕ್ಷಗಾನ ನಾಟ್ಯ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಪಂಚಲಿಂಗೇಶ್ವರ ಸದನ ವಿಟ್ಲದಲ್ಲಿ ನಡೆಯಿತು.

ದಿನಕರ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಯಕ್ಷಗಾನ ನಾಟ್ಯ ತರಬೇತಿಯನ್ನು ಉದ್ಘಾಟಿಸಿದರು.
ಕೃಷ್ಣಯ್ಯ ಕೆ. ವಿಟ್ಲ ಅರಮನೆ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ನಾಟ್ಯಗುರು ಸಬ್ಬಣ್ಣ ಕೊಡಿ ರಾಮಭಟ್ , ಜಯರಾಮ್ ಬಲ್ಲಾಳ್ ವಿಟ್ಲ ಅರಮನೆ, ವಕೀಲ ಪ್ರಕಾಶ್ ನಾರಾಯಣ ,ವಿ.ಆರ್.ಸಿ ರಮಾನಾಥ್ ವಿಟ್ಲ ಉಪಸ್ಥಿತರಿದ್ದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಶ್ ವಿಟ್ಲ ಇವರು ಸ್ವಾಗತಿಸಿ ಪ್ರಸ್ತಾವನೆ ಮಾಡಿದರು.
ಅರ್ಚನಾ ನಿರೂಪಿಸಿದರು. ಲತಾ ಲೋಕೇಶ್ ವಂದಿಸಿದರು.
