ಬಂಟ್ವಾಳ: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಇದರ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ೨೦೧೯-೨೦ನೇ ಸಾಲಿನ ಫಲಾನುಭವಿಗಳಿಗೆ  ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಮಂಜೂರಾತಿ ಪತ್ರ ಮತ್ತು ಆಟೋರಿಕ್ಷಾವನ್ನು ಹಸ್ತಾಂತರಿಸಿದರು.


ಬಂಟ್ವಾಳ  ಕ್ಷೇತ್ರದ ಫಲಾನುಭವಿಗಳಾದ ಸುಧಾಕರ, ವಾಮನ, ರಮೇಶ್, ಮೋಹನ, ಮಾಧವ, ವನಿತಾ, ಮಹಾಬಲೇಶ್ವರವರಿಗೆ ಬಿ.ಸಿ.ರೋಡಿನಲ್ಲಿರುವ  ಶಾಸಕರ ಕಚೇರಿ ಅವರಣದಲ್ಲಿ ಆಟೋರಿಕ್ಷಾ ಹಾಗೂ ಮಂಜೂರಾತಿ ಪತ್ರವನ್ನು  ವಿತರಿಸಲಾಯಿತು.

ಈ ಸಂದರ್ಭದಲ್ಲಿ ನಿಗಮದ ಅಧಿಕಾರಿ ಶಿವರಾಮ್ ಉಪಸ್ಥಿತರಿದ್ದರು.

By Suddi9 Author

Suddi9

Leave a Reply

Your email address will not be published. Required fields are marked *