ಬಂಟ್ವಾಳ : ಸಜಿಪನಡು ಗ್ರಾಮದ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ ಅವರು 5 ಲಕ್ಷ ರೂ.ಸಹಾಯಧನ ಮಂಜೂರುಗೊಳಿಸಿದ್ದು, ಚೆಕ್ ಅನ್ನು ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್ ಅವರಿಗೆ ಹಸ್ತಾಂತರಿಸಿದರು.

ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ. ಮೇಲ್ವಿಚಾರಕಿಯರಾದ ಅಮಿತಾ, ಶಕೀಲಾ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ ರಾಧಾಕೃಷ್ಣ ಆಳ್ವ ಪಂಚಾಯತ್ ಸದಸ್ಯ ವಿಟ್ಟಲ್ ದಾಸ್,ಪ್ರಮುಖರಾದ ಗಣಪತಿ ಭಟ್, ರಾಮಕೃಷ್ಣ ಭಟ್, ಭಾಸ್ಕರ, ನಿತಿನ್ ಅರಸ, ಹರೀಶ್ ಬಂಗೇರ, ಕೇಶವ ಮೊದಲಾದವರು ಉಪಸ್ಥಿತರಿದ್ದರು.
ಪ್ರತಾಪ್ ಸಿಂಹ ನಾಯಕ್ ಅವರಿ ತಮ್ಮ ಶಾಸಕರ ನಿಧಿಯಿಂದ ದೇವಾಲಯ ಸಂಪರ್ಕ ರಸ್ತೆ ಹಾಗೂ ಮುಂಭಾಗದ ತಡೆಗೋಡೆಗೆ ಅನುದಾನ ಒದಗಿಸುವ ಭರವಸೆಯಿತ್ತರು.
