ಮಂಗಳೂರು: ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋದನಾ ಸಂಸ್ಥೆ ಬಾಳ್ತಿಲ ಮತ್ತು ಸೇವಾಶ್ರಮ ದೇರಳಕಟ್ಟೆ ಸಹಯೋಗದೊಂದಿಗೆ ರಕ್ತ ಪರೀಕ್ಷೆ , ಮಧುಮೇಹ ಪರೀಕ್ಷೆ ಹಾಗೂ ಆರೋಗ್ಯ ಮಾಹಿತಿ ಶಿಬಿರ ಹಾಗೂ ವೃದ್ಧರೊಂದಿಗೆ ನಗು ನಲಿವು ಕಾರ್ಯಕ್ರಮ ನಡೆಯಿತು.

ಮೆಸ್ಕಾಂನ ಇಂಜಿನಿಯರ್ ನಿತೇಶ್ ಕುಮಾರ್ ಶಿಬಿರವನ್ನು ಉದ್ಘಾಟಿಸಿ, ಸಂಸ್ಥೆಯ ಸೇವೆ ಶ್ಲಾಘನೀಯ ಎಂದು ಹೇಳಿ ಸಂಸ್ಥೆಯ ಸೇವೆಗೆ ಶುಭ ಹಾರೈಸಿದರು.

ಟ್ರಸ್ಟಿ ಡಾ.ರಾಜೇಶ್ ಪೂಜಾರಿ ಆರೋಗ್ಯ ಮಾಹಿತಿ ನೀಡಿ ಹಾಗೂ ರಕ್ತದೊತ್ತಡ ಹಾಗೂ ಮಧುಮೇಹ ಪರೀಕ್ಷೆ ನಡೆಸಿದರು.

ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋದನಾ ಸಂಸ್ಥೆಯ ಸಂಸ್ಥಾಪಕಿ, ವಕೀಲೆ ಶ್ಯೆಲಜಾ ರಾಜೇಶ್ ಮಾತಾನಾಡಿ, ಅಮ್ಮಂದಿರು ನಮ್ಮನ್ನು ಹೊತ್ತು ಹೆತ್ತು ಸಾಕಿ ಸಲಹುತ್ತಾರೆ. ಆದರೆ ಅವರನ್ನು ಆಶ್ರಮಕ್ಕೆ ಬಿಟ್ಟು ಪ್ರೀತಿಯಿಂದ ವಂಚಿತಗೊಳಿಸುವುದು ಎಷ್ಟು ಸರಿ. ಎಂದು ಪ್ರಶ್ನಿಸಿದರು. ಅಲ್ಲದೇ ನಾವು ಮಗುವಾಗಿರುವಾಗ ಒಬ್ಬ ತಾಯಿ ನಮಗೋಸ್ಕರವಾಗಿಯೇ ಜೀವಿಸುತ್ತಾಳೆ. ಆಕೆಗೆ ವಯಸ್ಸಾದಾಗ ಅವಳನ್ನು ನಮ್ಮಮಗುವಂತೆ ಪ್ರೀತಿಸಿ ಎಂದು ಹಿತನುಡಿ ಹೇಳಿದರು.

ಆಶ್ರಮದವರಿಗೆ ಅವಶ್ಯಕ ದಿನ ಬಳಕೆ ಸಾಮಾಗ್ರಿಗಳ ಕಿಟ್ ನ್ನು ವಿತರಿಸಲಾಯಿತು.

ಟ್ರಸ್ಟಿ ಅನ್ನಪೂರ್ಣ ರಾಜೇಶ್ ಬಿ. ಸೇವಾಶ್ರಮದ ಮೇಲ್ವಿಚಾರಕ ಬಾಲಕೃಷ್ಣ ಉಪಸ್ಥಿತರಿದ್ದರು.

By Suddi9 Author

Suddi9

Leave a Reply

Your email address will not be published. Required fields are marked *