ಬಂಟ್ವಾಳ: ಜೆಸಿಐ ಬಂಟ್ವಾಳ ಇದರ 2021 ನೇ ಸಾಲಿನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರ ಸಂಜೆ ಬಿ.ಸಿ. ರೋಡಿನ ಮೊಡಂಕಾಪು ಬಳಿಯ ಸಾಯಿರಾಮ್ ಮೈದಾನದಲ್ಲಿ ವಿಜೃಂಭಣೆಯಿಂದ ನಡೆಯಿತು.ಕಾರ್ಯಕ್ರಮವನ್ನು ಜೇಸಿಐ ಬಂಟ್ವಾಳದ ನಿರ್ಗಮನ ಅಧ್ಯಕ್ಷ ಸದಾನಂದ ಬಂಗೇರ ಉದ್ಘಾಟಿಸಿದರು. ಅವರು ಮಾತನಾಡಿ ಕೊರೊನಾ ಲಾಕ್ ಡೌನ ಸಂದರ್ಭದಲ್ಲೂ ಜೇಸಿ ಸದಸ್ಯರು ಸುಮ್ಮನೆ ಕೂರದೆ ಬಡ ಕುಟುಂಬದ ಮನೆ ದುರಸ್ತಿ ಮಾಡಿ ಅವರಿಗೆ ಆಸರೆಯಾಗಿದ್ದಾರೆ. ವಲಯದ ವ್ಯವಹಾರ ಸಮ್ಮೇಳನವನ್ನು ಆಯೋಜಿಸಿ ವಲಯದಲ್ಲೂ ಬಂಟ್ವಾಳ ಘಟಕ ಗುರುತಿಸಿಕೊಂಡಿದ್ದು, ಸದಸ್ಯರೆಲ್ಲರ ಸಹಕಾರದಿಂದ ಈ ಕೆಲಸಗಳು ಸುಸೂತ್ರವಾಗಿ ನಡೆದಿದೆ ಎಂದರು. ನಿಕಟಪೂರ್ವ ಅಧ್ಯಕ್ಷ ಯತೀಶ್ ಕರ್ಕೆರಾ ಅವರನ್ನು ಸನ್ಮಾನಿಸಲಾಯಿತು.BTW_DCE27_1

ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ ಉಮೇಶ್ ಆರ್. ಮೂಲ್ಯ ಅಧಿಕಾರ ಸ್ವೀಕರಿಸಿದರು. ವಿವಿಧ ಘಟಕಗಳ ಉಪಾಧ್ಯಕ್ಷರಾಗಿ ದಯಾನಂದ ಎಡ್ತೂರು, ಶ್ರೀನಿವಾಸ್‍ಅರ್ಬಿಗುಡ್ಡೆ, ಕಿಶೋರ್ ಆಚಾರ್ಯ, ಅಕ್ಷಯ್, ರಾಜೇಂದ್ರ, ಕಾರ್ಯದರ್ಶಿಯಾಗಿ ರೋಷನ್ ರೈ, ಕೋಶಾಧಿಕಾರಿಯಾಗಿ ರವೀಣ ಕುಲಾಲ್ ಅವರಿಗೆ ಪದಪ್ರದಾನ ಮಾಡಲಾಯಿತು. 5 ಮಂದಿ ನೂತನ ಸದಸ್ಯರನ್ನು ಘಟಕಕ್ಕೆ ಸೇರ್ಪಡೆಗೊಳಿಸಿ ಪ್ರತಿಜ್ಞಾ ವಿಧಿ ಭೋದಿಸಲಾಯಿತು.

ನೂತನ ಅಧ್ಯಕ್ಷ ಉಮೇಶ್ ಆರ್. ಮೂಲ್ಯ ಆಶಯ ಭಾಷಣ ಮಾಡಿ ಮುಂದಿನ ಕಾರ್ಯಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿ ವಲಯ 15 ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ ಮಾತನಾಡಿ ಎಲ್ಲಾ ಅಧ್ಯಕ್ಷರ ನಾಯಕತ್ವ ಹಾಗೂ ಸದಸ್ಯರ ಸಹಕಾರದಿಂದಾಗಿ ಜೇಸಿಐ ಬಂಟ್ವಾಳ ಈ ವರ್ಷ ಅತ್ಯುತ್ತಮ ಕೆಲಸ ಮಾಡಿದೆ ಎಂದು ತಿಳಿಸಿದರು.ಶ್ರೀನಿವಾಸ್ ಯೂನಿವರ್ಸಿಟಿಯ ಮುಖ್ಯ ವೈದ್ಯಾಧಿಕಾರಿ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಮಾತನಾಡಿ ಜೇಸಿ ಸಂಸ್ಥೆ ಸದಸ್ಯರಿಗೆ ಸಂಸ್ಕಾರ, ಸಂಸ್ಕೃತಿ, ಶಿಸ್ತನ್ನು ಕಲಿಸಿ ಕೊಡುತ್ತದೆ. ಕೊರೊನಾ ಕಾಲದಲ್ಲೂ ಜೇಸೀ ಬಂಟ್ವಾಳ ಕೊರೊನಾ ವಾರಿಯರ್‍ಗಳಂತೆ ಕೆಲಸ ನಿರ್ವಹಿಸಿ ಬಡಜನರ ಸೇವೆ ಮಾಡಿರುವುದು ಅಭಿನಂದನೀಯ ಎಂದರು. ಕೊರೊನ ವೈರಸ್‍ನ ಮಾನಸಿಕತೆಯಿಂದ ಈಗಲೂ ಜನರು ಬಳಲುತ್ತಿದ್ದರೆ. ಅಂತವರಿಗೆ ಸಾಂತ್ವಾನ ನೀಡುವ ಕೆಲಸವನ್ನು ಜೇಸಿಯಂತಹ ಸಂಘಟನೆಗಳು ಮಾಡಬೇಕು ಎಂದರು.

ಇದೇ ಸಂದರ್ಭ ನೂತನ ಸಾಲಿನ ಮೊದಲ ಯೋಜನೆಯಾಗಿ ಬಡಕುಟುಂಬಕ್ಕೆ ಸೌರ ವಿದ್ಯುತ್ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಲಾಯಿತು.ವೇದಿಕೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಇದರ ಬಂಟ್ವಾಳ ಘಟಕದ ಅಧ್ಯಕ್ಷ ಜಯಾನಂದ ಪೆರಾಜೆ, ಚುನಾಯಿತ ವಲಯ ಉಪಾಧ್ಯಕ್ಷ ಶರತ್ ಕುಮಾರ್ ಉಪಸ್ಥಿತರಿದ್ದು ನೂತನ ಘಟಕಕ್ಕೆ ಶುಭ ಕೋರಿದರು. ನಿರ್ಗಮನ ಕಾರ್ಯದರ್ಶಿ ಗಣೇಶ್ ಕೆ. ಕುಲಾಲ್, ಕೋಶಾಧಿಕಾರಿ ಮೋಹನ್ ನೆಟ್ಲ, ನೂತನ ಕಾರ್ಯದರ್ಶಿ ರೋಷನ್ ರೈ, ಕೋಶಾಧಿಕಾರಿ ರವೀಣ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯರಾದ ನಾಗೇಶ್ ಬಾಳೆಹಿತ್ಲು, ಬಾಲಕೃಷ್ಣ ಕುಮಾರ್, ಸಂತೋಷ್ ಜೈನ್, ವೆಂಕಟೇಶ್, ದೀಪಕ್ ಸಾಲ್ಯಾನ್, ಅಕ್ಷಯ್ ಕುಮಾರ್ , ದಯಾನಂದ ರೈ ಸಹಕರಿಸಿದರು. ಲೋಕೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *