ಮೂಡುಬಿದಿರೆ:ಮೂಡುಮಾರ್ನಾಡು ಗ್ರಾಮದ ಬೆಳುವಾಯಿ- ಅಳಿಯೂರು ರಸ್ತೆಯಲ್ಲಿರುವ ಮಹಮ್ಮಾಯಿ ಮಂದಿರದ ಬಳಿ ಡಿ.15ರಂದು ರಾತ್ರಿ ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗೊಂಡಿದ್ದ ಬೈಕ್ ಸವಾರ ಸಂತೋಷ್ ಜೈನ್ (25) ಡಿ. 17ರ ರಾತ್ರಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮಂಗಳೂರು ಎ.ಜೆ. ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕೃಷಿ, ತೋಟ ನಿರ್ವಹಣೆ ಜೊತೆಗೆ ಇಲೆಕ್ಟಿಕಲ್, ಅಡುಗೆ ಕೆಲಸಗಳನ್ನೂ ಮಾಡುತ್ತಿದ್ದರು.
ಉರಿಯಾಲದ ಆದಿರಾಜ ಜೈನ್ ಅವರ ಪುತ್ರರಾಗಿರುವ ಸಂತೋಷ್ ಅವರಿಗೆ ಮೂವರು ಸಹೋದರಿಯರು ಮೂವರಿಗೂ ಮದುವೆಯಾಗಿದೆ. ಕೊನೆಯವರಾದ ಸಂತೋಷ್ ಅವಿವಾಹಿತರಾಗಿದ್ದರು. ತಂದೆ, ತಾಯಿ ತೀವ್ರ ಅಸೌಖ್ಯದಿಂದ ಬಳಲುತ್ತಿದ್ದು ಅವರ ಎಲ್ಲ ಆರೈಕೆ, ಪಾಲನೆಯನ್ನು ಸಂತೋಷ್ ಮಾಡುತ್ತಿದ್ದರು‌.

By suddi9

Leave a Reply

Your email address will not be published. Required fields are marked *