ಅಜೆಕಾರು:  ಬದುಕಿನಲ್ಲಿ ಸಿಗುವ ಯಾವುದೇ ಅವಕಾಶವನ್ನು ಬಿಡಬೇಡಿ, ಅವುಗಳನ್ನು ಸದುಪಯೋಗ ಪಡಿಸಿಕೊಂಡು ಪ್ರಗತಿಯ ಹಾದಿಯಲ್ಲಿ ಮುನ್ನಡೆಯಿರಿ ಎಂದು ಯುವ ಸಾಧಕ, ಹಿಮತ್ ಸಿಂಕ್ ಲಿನೆನ್ಸ ಕಂಪನಿಯ ಉನ್ನತಾಧಿಕಾರಿ  ವಿವೇಕ ನಂಬಿಯಾರ್ ಹೇಳಿದರು. ಅವರು ಅಜೆಕಾರು ಕುರ್ಪಾಡಿ ಬೊಬ್ಬರ್ಯಸ್ಥಾನದ ಆದಿಗ್ರಾಮೋತ್ಸವ ಕಾನನ ವೇದಿಕೆಯಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಆಯೋಜಿಸಿದ್ದ ಕಾನನ ಸಂಸ್ಖೃತಿ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

sanshruthi sambrama udghtane
ವಿಶಿಷ್ಟ ಕಾರ್ಯಕ್ರಮಗಳ ರೂವಾರಿ ಶೇಖರ ಅಜೆಕಾರು ಅವರ ಈ ರೀತಿಯ ಸಾಹಸವನ್ನು ವಿದ್ಯಾರ್ಥಿ ಜೀವನದಿಂದಲೇ ನೋಡುತ್ತಾ ಬಂದಿದ್ದೇನೆ. ಮತ್ತೆ ಇಂತಹ ಅವಕಾಶ ಸಿಕ್ಕಿರುವುದು ಸಂತೋಷ ತಂದಿದೆ ಎಂದು ಅವರು ಅಭಿಪ್ರಾಯ ಪಟ್ಟರು. ಊರಿನ ಸಾಧಕರು ಊರಿನ ಪ್ರತಿಭೆಗಳ ವಿಕಸನಕ್ಕೆ ವೇದಿಕೆ ಒದಗಿಸಿಕೊಡುವುದು ಮತ್ತು ಸೂಕ್ತ ಅವಕಾಶಗಳನ್ನು ಒದಗಿಸಿಕೊಡುವುದು ಶ್ಲಾಘನೀಯ ಎಂದು ಕುಚ್ಚೂರು ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂಸ್ಥೆಯ ಅಧ್ಯಕ್ಷ ರಾಜೇಶ ನಾಯ್ಕ್ ಹೇಳಿದರು.

ಸಾಧಕರನ್ನು ಸಾಧನೆಯ ಬಳಿಕ ಗುರುತಿಸುವ ಬದಲು ಅವರ ಬೆಳವಣಿಗೆ ಹಂತದಲ್ಲಿಯೇ ಗುರುತಿಸಿ ಪ್ರೋತ್ಸಾಹಿಸುವುದು ಶ್ರೇಷ್ಠ ಕೆಲಸ. ನನ್ನ ಮಗಳು ಆರಾಧನಾ ಸೇರಿ ಇಂದು ವಿವಿಧ ಕ್ಷೇತ್ರದಲ್ಲಿ ಮಿಂಚುತ್ತಿರುವ ಮಕ್ಕಳು ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ದೊರೆತ ಗೌರವದ ಬಳಿಕವೇ ಬೆಳಗಿದವರು ಎಂದು ಆರದಿರಲಿ ಬದುಕು ಆರಾಧನಾ ಸಂಸ್ಥೆಯ ಪದ್ಮಶ್ರೀ ಭಟ್ ನಿಡ್ಡೋಡಿ ಪ್ರಶಂಸಿದರು. ವಿಶ್ರಾಂತ ಮುಖ್ಯೋಪಾಧ್ಯಾಯ ಮೌರೀಸ್ ತಾವ್ರೋ, ಯುವ ಸಾಧಕ ರಾಘವೇಂದ್ರ ಪ್ರಭು ಕರ್ವಾಲು, ಮಹಮ್ಮಾಯಿ ಭಜನಾ ಮಂಡಳಿಯ ಅಧ್ಯಕ್ಷೆ ವಿಮಲಾ ಟೀಚರ್, ಮುಂಬಯಿಯ ಉದ್ಯಮಿ ಆತ್ರಾಡಿ ರಾಜು ಶೆಟ್ಟಿ ನಡಿಮನೆ ಅತಿಥಿಗಳಾಗಿದ್ದರು.

ಹಿರ್ಗಾನ ಪಂಚಾಯತ್ ಮಾಜಿ ಅಧ್ಯಕ್ಷ ರವಿ.ಪೂಜಾರಿ ನೆಲ್ಲಿಕಟ್ಟೆ, ಅಜೆಕಾರು ಮರ್ಣೆ ಪಂಚಾಯತ್ ಮಾಜಿ ಅಧ್ಯಕ್ಷೆ ಯಶೋದಾ ಶೆಟ್ಟಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಸೌಮ್ಯಶ್ರೀ ಎಸ್ ಅಜೆಕಾರು, ಸದಸ್ಯೆ ಶಶಿಕಲಾ ಜಯಂತ್ ಬೆಳುವಾಯಿ, ಜಡ್ಡು ಸುಂದರ ಶೆಟ್ಟಿ ಶಾಂತಿನಿಕೇತನದ ಸಿಇಒ ನರೇಂದ್ರ ಮೊದಲಾದವರು ಉಪಸ್ಥಿತರಿದ್ದರು.
ಸಮಿತಿಯ ರಾಜ್ಯಾಧ್ಯಕ್ಷ ಡಾ.ಶೇಖರ ಅಜೆಕಾರು ಅವರು ಅಧ್ಯಕ್ಷತೆ ವಹಿಸಿದ್ದೆರು. ಅನನ್ಯ ಎಸ್ ಉಡುಪ ವೇಣೂರು,  ಅವಿಕಾ ಶೆಟ್ಟಿ ಕಾರ್ಕಳ,  ವಸಂತಿ ಕಾರ್ಕಳ, ಶೈಲಜಾ ಕಾರ್ಕಳ, ರಚನ್ ಕಾರ್ಕಳ , ಶ್ರೀಶಾ- ಧನಿಶಾ ಸಹೋದರಿಯರು ಮುಂಬಯಿ, ಶಿರ್ವ ಸುಹಾಸ್ ತಂಡ, ಸುನಿಜ ಎಸ್.ಅಜೆಕಾರು, ಪ್ರಕೃತಿ ಆಚಾರ್ಯ ಕೈಕಂಬ ಸಂಸ್ಕೃತಿ ಸಂಭ್ರಮದಲ್ಲಿ ಪ್ರತಿಭಾ ಪ್ರದರ್ಶನ ಮಾಡಿದರು. ಬೆಳದಿಂಗಳ ಮಕ್ಕಳ ಸಮಿತಿಯ ಸುನಿಧಿ ಎಸ್ ಅಜೆಕಾರು ವಂದಿಸಿದರು.

By suddi9

Leave a Reply

Your email address will not be published. Required fields are marked *