ಬಂಟ್ವಾಳ: ಗ್ರಾಪಂ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನ ಇಬ್ಬರು ಪ್ರಮುಖ ನಾಯಕರು ಪಕ್ಷ ತೊರೆದು ಶಾಕ್ ನೀಡಿದ್ದಾರೆ.ಬಂಟ್ವಾಳ ತಾಪಂ.ನ ಕಾಂಗ್ರೆಸ್ ಸದಸ್ಯ ಕುಮಾರ ಭಟ್ ಬದಿಕೋಡಿ ಹಾಗೂ ಮಾಜಿ ತಾಪಂ ಸದಸ್ಯ ಮಾಧವ ಮಾವೆ ಅವರಿಬ್ಬರು ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದಾರೆ. ತಾಪಂ. ನ ಕಾಂಗ್ರೆಸ್ ಸದಸ್ಯರಾಗಿರುವ ಕುಮಾರ್ ಭಟ್ ಅವರು ಬುಧವಾರದಂದು ತಾಪಂ ನ ತಮ್ಮಸದಸ್ಯತ್ವಕ್ಕೆ ರಾಜೀನಾಮೆ ನೀಡಿ,ಕನ್ಯಾನದಲ್ಲಿ ಗ್ರಾಪಂ ಚುನಾವಣೆಗೆ ಕಣಕ್ಕಿಳಿದಿದ್ದಾರೆ.ಇವರನ್ನು ಇಲ್ಲಿ ಬಿಜೆಪಿ ಬೆಂಬಲಿಸಲಿದೆ.
ಈ ನಡುವೆ ತಾಪಂನ ಮಾಜಿ ಸದಸ್ಯ, ಮಾಧವ ಮಾವೆ ಅವರು ಕೂಡ ಕಾಂಗ್ರೆಸ್ ಪಕ್ಷವನ್ನು ತೊರೆಯಲಿದ್ದು,ಶುಕ್ರವಾರ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರಲಿದ್ದಾರೆ. ಈ ಇಬ್ಬರು ನಾಯಕರು ವಿಟ್ಲ,ವಿಟ್ಲಪಡ್ನೂರು,ಕನ್ಯಾನ, ಸಾಲೆತ್ತೂರು,ಮಾಣಿ ಭಾಗದಲ್ಲಿ ರಾಜಕೀಯವಾಗಿ ತಮ್ಮದೇ ಆದ ಪ್ರಭಾವವನ್ನು ಹೊಂದಿದ್ದಾರೆ.ಮಾಧವ ಮಾವೆ ಅವರು ಜಿಪಂನ ಹಾಲಿ ಸದಸ್ಯೆ ಮಂಜುಳಾ ಮಾವೆಯವರ ಪತಿಯಾಗಿದ್ದಾರೆ.ಇವರಿಬ್ಬರ ರಾಜೀನಾಮೆಯಂತ ಬೆಳವಣಿಗೆ ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಪಡೆಸಾಲೆಯಲ್ಲಿ ಚರ್ಚೆಗೆ ಕಾರಣವಾಗಿದೆ.
