ಬಂಟ್ವಾಳ : ದ.ಕ. ಜಿಲ್ಲಾ ಪೊಲೀಸ್ ಸೈಬರ್ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮ ಬಿ.ಸಿ.ರೋಡ್ ಜಂಕ್ಷನ್‌ನಲ್ಲಿ ಗುರುವಾರ ಜರಗಿತು.
IMG-20201217-WA0035
ಮಂಗಳೂರು ಸಿಇಎನ್ ಅಪರಾಧ ಪೊಲೀಸ್ ಠಾಣೆ ಎಸ್ ಐ ಪಳನಿ ಸ್ವಾಮಿ ಅವರು ಮಾಹಿತಿ ನೀಡಿ, ಅಪರಿಚಿತ ವ್ಯಕ್ತಿಗಳು ಮೊಬಲ್‌ಗೆ ಕರೆ ಮಾಡಿ ಬ್ಯಾಂಕ್ ವಿವರ ಮಾಹಿತಿ ಕೇಳಿದಲ್ಲಿ  ವ್ಯವಹರಿಸದೆ ಜಾಗರೂಕರಾಗಿರಬೇಕು. ಹಾಗೂ ವಿವಿಧ ರೀತಿಯ ವಂಚನಾ ಜಾಲಗಳ ಬಗ್ಗೆ ಜಾಗೃತೆ ವಹಿಸಬೇಕು ಎಂದು ಹೇಳಿದರು.
ಬಂಟ್ವಾಳ ನಗರ ಠಾಣೆ ಸಹಾಯಕ ಉಪ ನಿರೀಕ್ಷಕ ಜಯಾನಂದ, ಸಂಚಾರಿ ಠಾಣಾ ಸಿಬಂದಿ ರಾಜು ಪೂಜಾರಿ, ಪ್ರಮುಖರಾದ ಮಂಜು ವಿಟ್ಲ, ರಾಮಣ್ಣ ಹಾಗೂ ರಿಕ್ಷಾ ಚಾಲಕ-ಮಾಲಕರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *