ಬಂಟ್ವಾಳ: ಹಿಂದೂ ಯುವ ಸೇನೆ ಬಂಟ್ವಾಳ ತಾಲೂಕು ಘಟಕದ ಮಹಾಸಭೆಯು ಶ್ರೀ ವೈದ್ಯನಾಥ ದೈವಸ್ಥಾನ ಬಂಟ್ವಾಳ ಇದರ ವಠಾರದಲ್ಲಿ ಜರಗಿತು. ಈ ಸಭೆಯಲ್ಲಿ ತಾಲೂಕು ಘಟಕದ ನೂತನ ಸಮಿತಿಯನ್ನು ಪುನ: ರಚಿಸಲಾಯಿತು. ನೂತನ ಸಮಿತಿಯ ಗೌರವ ಅಧ್ಯಕ್ಷರಾಗಿ ಶಿವರಾಮ್ ಶೆಟ್ಟಿ ಜಕ್ರಿಬೆಟ್ಟು ,ಅಧ್ಯಕ್ಷರಾಗಿ ಪುಷ್ಪರಾಜ್ ಜಕ್ರಿಬೆಟ್ಟು  ಅವರನ್ನು ಆಯ್ಕೆ ಮಾಡಲಾಯಿತು.f2b566de-df28-40eb-a516-e9e439b6dea8

ಕಾರ್ಯದರ್ಶಿಯಾಗಿ ವಸಂತ್ ಕುಮಾರ್ ವಿ ಮಣಿಹಳ್ಳ ,ಗೌರವ ಸಲಹೆಗಾರರಾಗಿ ಪದ್ಮನಾಭ ಯು. ಎಸ್. ನಾವೂರು, ರಾಮಚಂದ್ರ ಗೌಡ ಮಣಿ , ಜಯರಾಜ ರಾಮನಗರ ,ಸುಂದರ ಪೂಜಾರಿ ಮಜಲೋಡಿ ಮತ್ತು ಸಮಿತಿಯ ಇತರ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಸರ್ವಾನುಮತದಿಂದ ಆರಿಸಲಾಯಿತು.
ವಸಂತ ಕುಮಾರ್ ವಿ ಸ್ವಾಗತಿಸಿ ಶಿವಪ್ರಸಾದ್ ಬಂಟ್ವಾಳ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *